ನವದೆಹಲಿ: 5,966.4 ಕೋಟಿ ರೂ.ಗಳಿಗೆ 5 ವರ್ಷಗಳಿಗೆ ಅನ್ವಯವಾಗುವಂತೆ ಬಿಸಿಸಿಐ ಮಾಧ್ಯಮ ಹಕ್ಕನ್ನ ವಯಾಕಾಮ್-18 ಪಡೆದುಕೊಂಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಈ ಕುರಿತಾಗಿ ಗುರುವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಂದಿನ 5 ವರ್ಷಗಳವರೆಗಿನ ಮಾಧ್ಯಮ ಹಕ್ಕುಗಳನ್ನ ಗೆದ್ದಿದ್ದಕ್ಕಾಗಿ ವಯಾಕಾಮ್-18 ಸಂಸ್ಥೆಗೆ ಅಭಿನಂದನೆಗಳು. ಐಪಿಎಲ್ ಮತ್ತು ಡಬ್ಲ್ಯೂಪಿಎಲ್ ನಂತರ ಭಾರತ ಕ್ರಿಕೆಟ್ ತಂಡದ ಬೆಳವಣಿಗೆ ಮುಂದುವರಿಯುತ್ತದೆ. ಬಿಸಿಸಿಐ ಮಾಧ್ಯಮ ಹಕ್ಕುಗಳ ಪಾಲುದಾರಿಕೆಯನ್ನು ವಿಸ್ತರಿಸುತ್ತೇವೆ. ನಾವು ಜೊತೆಗೂಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಲ್ಪನೆಯನ್ನು ಸೆರೆಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ
ಜಿಯೋ ಸಿನಿಮಾ ಮೊಬೈಲ್ ಆ್ಯಪ್ ಮತ್ತು ಸ್ಫೋರ್ಟ್ಸ್-18 ಟಿವಿ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ವಯೋಕಾಮ್-18, ಬಿಸಿಸಿಐನ ಡಿಜಿಟಲ್ ಮತ್ತು ಟಿವಿ ಹಕ್ಕುಗಳನ್ನ ಗೆದ್ದುಕೊಂಡಿದೆ.
ಈ ಮೂಲಕ 2018ರಲ್ಲಿ 6,138 ಕೋಟಿ ರೂ.ಗೆ ಮಾಧ್ಯಮ ಹಕ್ಕುಗಳನ್ನ ಉಳಿಸಿಕೊಂಡಿದ್ದ ಡಿಸ್ನಿಪ್ಲಸ್ ಹಾಟ್‌ಸ್ಟಾರ್, ಬಿಸಿಸಿಐ ಜೊತೆಗಿನ ಒಪ್ಪಂದವನ್ನ ಕೊನೆಗೊಳಿಸಿದೆ.