ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾದಿ 6 ತಿಂಗಳ ಬಾಹ್ಯಾಕಾಶ ಯಾತ್ರೆಯಲ್ಲಿದ್ದಾರೆ. ಇತ್ತೀಚೆಗೆ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಪುತ್ರನೊಂದಿಗೆ ಮಾತನಾಡಿದ್ದಾರೆ.
‘ಭೂಮಿಯ ಬಗ್ಗೆ ಹೆಚ್ಚು ಇಷ್ಟ ಪಡುವ ವಿಷಯ ಯಾವುದು?’ ಎಂದು ಪುತ್ರ ತಂದೆಯನ್ನು ಕೇಳಿದಾಗ…’ನಾವು ಇಲ್ಲಿ ಮೈಕ್ರೋಗ್ರಾವಿಟಿ ಪರಿಸರದಲ್ಲಿದ್ದೇವೆ. ನೀನು ಇಷ್ಟಪಡುವ ಅನೇಕ ವಿಷಯಗಳನ್ನು ನಾವು ಇಲ್ಲಿ ಮಾಡಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರಬಹುದು’ ಎಂದಿದ್ದಾರೆ.