ನಟ ವಿಜಯ್ ರಾಘವೇಂದ್ರ, ನಟ ದರ್ಶನ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ದರ್ಶನ್ ಅವರನ್ನು ನಾನು ಅಣ್ಣ ಎನ್ನುತ್ತೇನೆ, ಅವರ ಸಹೋದರನಾಗಿ ಹೇಳುತ್ತಿದ್ದೇನೆ ಎಂದು ತಮ್ಮ ಮನಸ್ಸಿನ ಮಾತಿನ ಜೊತೆಗೆ ‘ಕಾಟೇರ’ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಪ್ಯಾನ್ ಇಂಡಿಯಾ ಅಂತಾರೆ, ಹಾಗೆನ್ನುವುದು ಅಷ್ಟು ಹಗುರವಲ್ಲ, ನಮ್ಮ ಸಿನಿಮಾ ಊರಿನ ಜನ ನೋಡಬೇಕು. ಅದು ನಮ್ಮಲ್ಲಿಯೇ ಗಳಿಕೆಯಾಗಬೇಕು. ಕಾಟೇರ ತರಹ ಸದ್ದು ಮಾಡಬೇಕು ಅಂದಾಗ ಅದು ಪ್ಯಾನ್ ಇಂಡಿಯಾ ಆಗುವುದೆಂದು ಕೊಂಡಾಡಿದ್ದಾರೆ.