ಐಲ ಕ್ಷೇತ್ರದಲ್ಲಿ ವಿಷು ಜಾತ್ರೆ ಪ್ರಯುಕ್ತ ವಿರಾಟ್ ಭಜನಾ ನೃತ್ಯ ಹಾಗೂ ಬೆಡಿ ಉತ್ಸವ

Share with

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರಾಮಹೋತ್ಸವ ಏಪ್ರಿಲ್.13ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡು ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯುತ್ತಿದೆ.

ವಿಷು ಜಾತ್ರೆ ಪ್ರಯುಕ್ತ ವಿರಾಟ್ ಭಜನಾ ನೃತ್ಯ ಹಾಗೂ ಬೆಡಿ ಉತ್ಸವ

ಇದರ ಅಂಗವಾಗಿ ಏಪ್ರಿಲ್.16ರಂದು ಪೂರ್ವಾಹ್ನ ನಿತ್ಯ ಪೂಜೆ ಹಾಗೂ ವಿವಿಧ ವೈಧಿಕ ಕಾರ್ಯಕ್ರಮ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, 12.30ರಿಂದ ತಾಳಮದ್ದಳೆ, ರಾತ್ರಿ 7.30ರಿಂದ ಪೂಜೆ, ಬಲಿ ಉತ್ಸವ, ರಾಜಾಂಗಣ ಪ್ರಸಾದ ಕೆರೆದೀಪೋತ್ಸವ, ರಾತ್ರಿ 10ರಿಂದ ಐಲ ಮೈದಾನದಲ್ಲಿ ವಿವಿಧ ಕುಣಿತ ಭಜನಾ ತಂಡಗಳ ಸಮ್ಮಿಲನದೊಂದಿಗೆ ಏಕಕಾಲದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, ಕಟ್ಟೆಪೂಝೆ, ಸಾರ್ವಜನಿಕ ಬೆಡಿ ಉತ್ಸವ ಜರಗಿಲಿದೆ. ಈ ತಿಂಗಳ 18ರಂದು ಜಾತ್ರೆ ಸಂಪನ್ನಗೊಳ್ಳಲಿದೆ.


Share with

Leave a Reply

Your email address will not be published. Required fields are marked *