ಉಪ್ಪಳ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯ ಹಿಂದು ವಿರೋಧಿ ಹೇಳಿಕೆ ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃ ಶಕ್ತಿ, ದುರ್ಗಾವಾಹಿನಿ , ಮಂಗಲ್ಪಾಡಿ ಖಂಡ ಸಮಿತಿ ವತಿಯಿಂದ ಉಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜುಲೈ. 5ರಂದು ಸಂಜೆ ನಡೆಯಿತು. ಮೆರವಣಿಗೆಯು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಿಂದ ಹೊರಟು ಉಪ್ಪಳ ಪೇಟೇಯಲ್ಲಿ ಸಮಾಪ್ತಿಗೊಂಡಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಅನಿಲ್ ಮಣಿಯಂಪಾರೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್, ಬಿಜೆಪಿ ಸಹಿತ ಸಂಘ ಪರಿವಾರದ ನೇತಾರು, ಕಾರ್ಯಕರ್ತರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಭಾಗವಹಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಸ್ವಾಗತಿ, ಬಿಜೆಪಿ ನೇತಾರ ಹರಿಶ್ಚಂದ್ರ ಮಂಜೇಶ್ವರ ವಂದಿಸಿದರು.