ಕಾಸರಗೋಡು : ವಿಶ್ವಕರ್ಮ ಜನಾಂಗದ ಸಂಸ್ಕೃತಿ ಸಂವರ್ಧನೆಗಾಗಿ ವಿಶ್ವಕರ್ಮ ಯುವಕ ಸಂಘ ಮಧೂರು ಇದರ ಆಶ್ರಯದಲ್ಲಿ ನಡೆದ ವಿಶ್ವರೂಪಂ 2024 ಯುವ ಸಮಾವೇಶ ಕಾರ್ಯಕ್ರಮ ಸಂಪನ್ನಗೊಂಡಿತು.
ಇದರ ಅಂಗವಾಗಿ ಐದು ವಾರಗಳಲ್ಲಾಗಿ ವಿವಿಧ ಸಾಹಿತ್ಯ,ಸಾಂಸ್ಕೃತಿಕ ,ಕ್ರೀಡಾ ಕಾರ್ಯಕ್ರಮಗಳು ಜರಗಿ ಅಂತಿಮವಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ಅನೆಗುಂದಿ ಮಹಾಸಂಸ್ಥಾನಮ್ ನ ಶ್ರೀಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚವಿತ್ತರು. “ವಿಶ್ವದಲ್ಲಿ ಬಹುಪಯೋಗಿ ಜನಾಂಗವಾಗಿ ಗುರುತಿಸಿಕೊಂಡಿರುವ ವಿಶ್ವಕರ್ಮ ಸಮುದಾಯ ದೇಸಿ ಸಂಸ್ಕೃತಿಗೆ ಪುರಾಣ ವೇದ ಕಾಲದಿಂದಲೇ ಅನನ್ಯ ಕೊಡುಗೆ ನೀಡಿರುವುದು ಗಮನಾರ್ಹ. ಇದೀಗ ಇಂತಹ ಸಮುದಾಯದ ಜಾಗೃತಿಗಾಗಿ ಉತ್ಸಾಹಿ ತರುಣರು ಏರ್ಪಡಿಸಿದ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ಕಾಯಕಲ್ಪಕ್ಕೊಂದು ಕೊಡುಗೆಯಾಗಿದೆ ಎಂದರು.ಆನೆಗುಂದಿ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ಯ ಸಭೆಯ ಅಧ್ಯಕ್ಷತೆವಹಿಸಿದ್ದರು.ಮಧೂರು ಶ್ರೀಕಾಳಿಕಾಂಬ ಮಠದ ಕೆ.ಪ್ರಭಾಕರ ಆಚಾರ್ಯ, ಎಂ ಪುರುಷೋತ್ತಮ ಆಚಾರ್ಯ ಕಂಬಾರು, ಶ್ರೀಧರ ಆಚಾರ್ಯ,ಜನಾರ್ಧನ ಆಚಾರ್ಯ ಮಠದ ಮನೆ,ಬಿ.ಎಂ.ಯದುನಂದನ ಆಚಾರ್ಯ,ಕೆ.ಸುಂದರ ಆಚಾರ್ಯ,ರಾಜೇಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಯುವ ಸಮಾವೇಶದ ಪೂರ್ವಭಾವಿಯಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ಬಿ.ಸೂರ್ಯ ಕುಮಾರ್ ಆಚಾರ್ಯ ವಿತರಿಸಿದರು.ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುವ ಸಮಾವೇಶದ ಅಂಗವಾಗಿ ಉಳಿಯತ್ತಡ್ಕದಿಂದ ಮಧೂರಿನ ವರೆಗೆ ಬೈಕ್ ರಾಲಿ ಜರಗಿತು. ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಬಾಲಕೃಷ್ಣ ಆಚಾರ್ಯ ಪುತ್ತಿಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಗುರು ಪರಂಪರೆ ಐತಿಹಾಸಿಕ ನೋಟ ಎಂಬ ವಿಷಯದ ಬಗ್ಗೆ ವೈ ಧರ್ಮೇಂದ್ರ ಆಚಾಐð ಮಧೂರು, ಸಂಸ್ಕಾರಯುತ ಶಿಕ್ಷಣ ಯುವ ಜನಾಂಗ ಎಂಬ ವಿಷಯದ ಬಗ್ಗೆ ಕೆ.ಗಂಗಾಧರ ಆಚಾರ್ಯ,ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಗ್ರೀಷ್ಮಾ ಆಚಾರ್ಯ ಬೇಕೂರು ವಿಷಯ ಮಂಡಿಸಿದರು. ಬಳಿಕ ಡಾ.ಬಿ.ಎಂ.ಬಾಲಕೃಷ್ಣ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಯುವ ಸಾಧಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಸ್ವರ್ಣೋದ್ಯಮಿ ಅರವಿಂದ ವೈ ಆಚಾರ್ಯ,ಸುರೇಶ್ ಕುಮಾರ್ ಡಿ.ಆಚಾರ್ಯ ಕಟಪಾಡಿ ಜಗದೀಶ್ ಆಚಾರ್ಯ ಮಂಗಳೂರು ಭಾಗವಹಿಸಿದ್ದರು.