ಬಂಟ್ವಾಳ: ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ

Share with

ಬಂಟ್ವಾಳ: ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ “ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ, ಮನೆ, ಮನ ಸಂಪರ್ಕ ಅಭಿಯಾನ”ದ ಅಂಗವಾಗಿ ಬಂಟ್ವಾಳದ ಸರಪಾಡಿ ಮತ್ತು ದೇವಶ್ಯಮೂಡೂರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ

ಲೋಕಸಭಾ ಅಭ್ಯರ್ಥಿಯ ಪರಿಚಯ ಪತ್ರ ಹಾಗೂ ಮೋದಿ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ನೀಡಿದರು. ಎ.14ರಂದು ಮಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ರೋಡ್ ಶೋ ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

Akashaya College

ಕಾರ್ಯಕರ್ತರನ್ನು ಭೇಟಿಯಾಗಿ ಅವರ ಜೊತೆ ಮಾತನಾಡಿದ ಅವರು, ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಾರ್ಯಕರ್ತರು ನಮ್ಮ ನಮ್ಮ ಬೂತ್ ಗಳ ಮನೆಗೆ ಭೇಟಿ ನೀಡಿ, ಮತದಾರರ ಮನವೊಲಿಸಿ, ಬಿಜೆಪಿಗೆ ಮತನೀಡುವಲ್ಲಿ ಮನಪರಿವರ್ತನೆ ಮಾಡುವಂತೆ ಮನವಿ ಮಾಡಿದರು. ಮೋದಿಯವರ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ಎಳೆಯ ಮಕ್ಕಳಿಗೂ ತಿಳಿದಿದ್ದು, ಮುಂದಿನ ಎಲ್ಲಾ ದಿನಗಳು ಬಿಜೆಪಿ ದಿನಗಳಾಗಿ ಪರಿವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಮಹತ್ವದ್ದಾಗಿದ್ದು, ದೇಶದ ಅಭಿವೃದ್ಧಿ ಜೊತೆಗೆ ಸನಾತನ ಧರ್ಮ ಉಳಿಯಬೇಕಾಗದರೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅರಳಬೇಕು ಎಂದು ತಿಳಿಸಿದರು. ಗ್ರಾಮದ ಮೂಲೆ ಮೂಲೆಗಳಿಗೆ ಸಂಚಾರ ಮಾಡಿ, ಕಾರ್ಯಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುವ ಏಕೈಕ ಶಾಸಕ ರಾಜೇಶ್ ನಾಯ್ಕ್ ಅವರು ಎಂದು ತಿಳಿಸಿದರು.

ಸರಪಾಡಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ನಳಿನಿ, ಹಿಂದುಳಿದ ವರ್ಗದ ರಾಜ್ಯ ಕಾರ್ಯ ಕಾರಿಣಿ ಸದಸ್ಯ ಪ್ದಜ್ವಲ್ ಬಂಗೇರ, ಪ್ರಮುಖರಾದ ಡೀಕಯ್ಯ, ವಸಂತ, ಹರೀಶ್, ಕುಮಾರ್ ಆಳ್ವ, ರಾಜ ಎಕ್ಕುಡೇಲು, ಜಯ ಪೂಜಾರಿ ಕೋಡಿ, ರಾಮಕೃಷ್ಣ ಮಯ್ಯ, ಶರ್ಮಿತ್ ಜೈನ್, ರವೀಂದ್ರ ಶೆಟ್ಟಿ, ಜಗದೀಶ್ ಪೂಜಾರಿ ಕುಂಟಾಲ್ ಪಲ್ಕೆ, ಅನೂಪ್ ಮಯ್ಯ, ಧರಣೇಂದ್ರ ಜೈನ್, ಜಯರಾಮ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು. ಸುದರ್ಶನ್ ಬಜ ಸ್ವಾಗತಿಸಿ, ವಂದಿಸಿದರು.


Share with

Leave a Reply

Your email address will not be published. Required fields are marked *