
ವಿಟ್ಲ : ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ರಸ್ತೆಗೆ ಎಸೆಯಲ್ಪಟ್ಟು, ಮೃತಪಟ್ಟ ಘಟನೆ ಜು.25ರಂದು ತಡರಾತ್ರಿ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ.
ಪೆರುವಾಯಿ ನಿವಾಸಿ ಅಬ್ಬಾಸ್ ಎಂ.ಮೃತಪಟ್ಟ ರಿಕ್ಷಾ ಚಾಲಕರಾಗಿದ್ದಾರೆ.
ಆರೋಪಿ ಕಾರು ಚಾಲಕ ವಿಟ್ಲದ ಕಡೆಯಿಂದ ಕುದ್ದುಪದವು ಕಡೆಗೆ ಸಾಗುತ್ತಿದ್ದ ವೇಳೆ ಉಕ್ಕುಡ ದರ್ಬೆ ಎಂಬಲ್ಲಿ ದುರ್ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಅಂಬುಲೆನ್ಸ್ ಮೂಲಕ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅವರು ಆ ವೇಳೆಗೆ ಮೃತಪಟ್ಟಿದ್ದರು.
ಈ ಬಗ್ಗೆ ಆರೋಪಿ ಕಾರು ಚಾಲಕನ ವಿರುದ್ಧ ಮೊಯ್ದಿಕುಂಞ ವಿಟ್ಲ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.





