
ವಿಟ್ಲ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಏಕಾಏಕಿ ನಿಂತ ಕೇರಳ ಸರ್ಕಾರಿ ಬಸ್ಸಿಗೆ ಹಿಂದಿನಿಂದ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಘಟನೆ ವಿಟ್ಲ ದಲ್ಲಿ ನಡೆದಿದೆ.

ವಿಟ್ಲ ಪೇಟೆಯಿಂದ ಕಾಸರಗೋಡು ಕಡೆಗೆ ಹೊರಟಿದ್ದ ಬಸ್ಸಿಗೆ ಕಾರು ಡಿಕ್ಕಿಯಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಬಸ್ ರಸ್ತೆಯಲ್ಲೇ ಬಾಕಿಯಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ.
ಕೇರಳ ಸಾರಿಗೆ ಇಲಾಖೆಯ ಗಮನಕ್ಕೆ ತಂದರೂ, ಚಾಲಕರು ಕೇರಳ ಸರ್ಕಾರಿ ಬಸ್ಸನ್ನು ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ತೆರಳುತ್ತಿಲ್ಲ. ನಿಲ್ದಾಣದ ಒಳಗೆ ಬಸ್ ಹೋಗದೇ ರಸ್ತೆಯಲ್ಲೇ ನಿಲ್ಲುತ್ತಿರುವುದು ಇಂತಹ ಅಪಘಾತಕ್ಕೆ ಕಾರಣವೆನ್ನಲಾಗಿದೆ.




