ವಿಟ್ಲ: ಶಿಕ್ಷಣ ತಜ್ಞ, ವಿಠಲ್ ಜೇಸೀಸ್ ಎಜುಕೇಷನ್ ಸೊಸೈಟಿ ಮತ್ತು ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ, ಎಲ್.ಎನ್.ಕೂಡೂರು ಅವರಿಗೆ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ನಲ್ಲಿ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲೆ, ಶಿಕ್ಷಕರು, ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳ ವತಿಯಿಂದ ಮಂಗಳವಾರ ನುಡಿ ನಮನ ಕಾರ್ಯಕ್ರಮ ನಡೆಯಿತು.
ಎಲ್.ಎನ್.ಕೂಡೂರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ, ಕೃಷಿ ಕ್ಷೇತ್ರದಲ್ಲಿ ನಡೆದ ಹಾದಿ, ಸಾಧನೆ, ಸೇವಾ ಕಾರ್ಯಗಳನ್ನು ನುಡಿ ನಮನದ ಮೂಲಕ ನೆನಪಿಸಿ ಕೊಳ್ಳಲಾಯಿತು.
ಆಡಳಿತ ಮಂಡಳಿ ಉಪಾಧ್ಯಕ್ಷ ಡಿ. ಶ್ರೀಧರ ಶೆಟ್ಟಿ, ಕಾರ್ಯದರ್ಶಿಗಳಾದ ಮೋಹನ ಎ., ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ನಿರ್ದೇಶಕರಾದ ಹಸನ್ ವಿಟ್ಲ, ಗೋಕುಲ್ ಸೇಠ್, ವಿಜಯ ಪಾಯಿಸ್, ವಿಟ್ಲ ಜೆಸಿಐ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಶ್ರದ್ಧಾಂಜಲಿ ಸಲ್ಲಿಸಿದರು.
ಶಾಲಾ ಪ್ರಾಂಶುಪಾಲ ಜಯರಾಮ ರೈ, ಆಡಳಿತಾಧಿಕಾರಿ ರಾಧಾಕೃಷ್ಣ ಎ., ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ , ಸಹ ಶಿಕ್ಷಕರಾದ ಐಡಾ, ಕವಿತಾ, ದೇವಿಕಾ, ಜಯಶ್ರೀ, ಸವಿತಾ, ವಿದ್ಯಾರ್ಥಿಗಳು ನುಡಿ ನಮನ ಸಲ್ಲಿಸಿದರು.