ವಿಟ್ಲ : ತಾಲೂಕು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ  ಸಭೆ      

Share with

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ ಟ್ರಸ್ಟ್ ವಿಟ್ಲ ತಾಲೂಕಿನ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ  ಸಭೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ  ತ್ರೈಮಾಸಿಕ ಸಾಧನೆಯ ಅವಲೋಕನ ಸಭೆ ವಿಟ್ಲ ಯೋಜನಾ ಕಚೇರಿಯ ಸಭಾಭವನದಲ್ಲಿ ನಡೆಯಿತು.        ಸಭೆಯನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೋನಾಲ್ಡ್ ಡಿಸೋಜ   ಮಾತನಾಡಿ ತಾಲೂಕಿನಲ್ಲಿ ಯೋಜನೆಯ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯನ್ನು ಜನಜಾಗೃತಿ ವೇದಿಕೆಯ ಸದಸ್ಯರ ಗಮನಕ್ಕೆ ತರಬೇಕೆಂದು ತಿಳಿಸಿದರು.

ವಿಟ್ಲ ತಾಲೂಕಿನ ಯೋಜನಾಧಿಕಾರಿ  ರಮೇಶ್ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ 2023 -24ನೇ ಸಾಲಿನ ಸಾಧನೆಯ ವರದಿಯನ್ನು ಮಂಡಿಸಿದರು.  ನಂತರ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಎಲ್ಲಾ ವಲಯದ ಮೂರು ತಿಂಗಳ ಸಾಧನ ವರದಿಯನ್ನು ಆಯ ವಲಯದ ಮೇಲ್ವಿಚಾರಕರು ಮಂಡಿಸಿದರು.

ಜಿಲ್ಲಾ ನಿರ್ದೇಶಕರಾದ  ಪ್ರವೀಣ್ ಕುಮಾರ್   ಜು.13ರಂದು  ಪುತ್ತೂರು ಕೋಟೆಚಾ ಹಾಲ್ ನಲ್ಲಿ ನಡೆಯುವ ಯೋಜನೆಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಲ್. ಎಚ್ ಮಂಜುನಾಥ್  ಅವರ ಅಭಿನಂದನಾ ಕಾರ್ಯಕ್ರಮದ ಬಗ್ಗೆ ಮತ್ತು ವಲಯದ ಸಾಧನೆ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.                             ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಮೂಲಕ ನಡೆಯುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು  ವಿಟ್ಲ ವಲಯದಲ್ಲಿ   ಹಾಗೂ ಸಮಾರೋಪ ಕಾರ್ಯಕ್ರಮವನ್ನು ಮಾಣಿ ವಲಯದಲ್ಲಿ ಮಾಡುವುದೆಂದು ಹಾಗೂ ವೇದಿಕೆಯ ಎಲ್ಲಾ ಕಾರ್ಯಕ್ರಮಗಳ ಸಭೆಗಳಲ್ಲಿ ಶೌರ್ಯ ತಂಡದ ಪದಾಧಿಕಾರಿಗಳು, ತಾಲೂಕು ಭಜನಾ ಪರಿಷತ್ತಿನ ಪದಾಧಿಕಾರಿಗಳು, ಜನಜೀವನ ಸಮಿತಿಯ ಪದಾಧಿಕಾರಿಗಳನ್ನು ಆಹ್ವಾನಿಸ ಬೇಕೆಂದು ನಿರ್ಣಯಿಸಲಾಯಿತು. 

ಕಾರ್ಯಕ್ರಮದ ವೇದಿಕೆಯಲ್ಲಿ  ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಕೆಯ್ಯುರು ನಾರಾಯಣ ಭಟ್, ವಿಟ್ಲ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ವಕೀಲರಾದ ನಟೇಶ್ ವಿಟ್ಲ , ಉಪಸ್ಥಿತರಿದ್ದರು.                        ಕಾರ್ಯಕ್ರಮದಲ್ಲಿ ಎಲ್ಲಾ ವಲಯದ ಜನ ಜಾಗೃತಿ ವೇದಿಕೆಯ ಅಧ್ಯಕ್ಷರುಗಳು, ಜನಜಾಗೃತಿ ವೇದಿಕೆಯ ಸದಸ್ಯರುಗಳು, ತಾಲೂಕಿನ ಎಲ್ಲಾ ವಲಯದ ಒಕ್ಕೂಟದ ಅಧ್ಯಕ್ಷರುಗಳು, ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.                    ಅಳಿಕೆ ವಲಯದ ಮೇಲ್ವಿಚಾರಕಿ ಮಾಲತಿ  ಸ್ವಾಗತಿಸಿದರು .ಕೇಪು ವಲಯ ಮೇಲ್ವಿಚಾರಕ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *