ವಿಟ್ಲ: ವಿಠಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

Share with

ವಿಟ್ಲ: ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ವಿಠಲ ಎಜುಕೇಶನ್ ಸೊಸೈಟಿ ವಿಠಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘ ೨೦೨೪-೨೫ರ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.

ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ ಮಾತನಾಡಿ,
ವಿದ್ಯಾರ್ಥಿಗಳ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೆಲಸ ಮಾಡಬೇಕಾಗಿದೆ. ಗುರಿಯ ಕಡೆಗೆ ಪ್ರಯತ್ನ ಶೀಲತೆಯಲ್ಲಿ ಮುಂದೆ ಹೋಗುವವರಿಗೆ ಯಾವತ್ತೂ ಸೋಲಾಗುವುದಿಲ್ಲ. ಸೋಲು ಎಂಬುದನ್ನು ಸವಾಲಾಗಿ ಸ್ವೀಕರಿಸುವ ಕಾರ್ಯವಾಗಬೇಕು ಎಂದು
ತಿಳಿಸಿದರು. ಕೆಟ್ಟ ಕೆಲಸವನ್ನು ಮಾಡಲು ಮುಂದಾಗುವವರನ್ನು ತಡೆಯುವ ನಿಜವಾದ ನಾಯಕನಾಗಿರುತ್ತಾನೆ. ಮೊಬೈಲ್ ಸೇರಿ ಅಧ್ಯಯನಕ್ಕೆ ತೊಡಕಾಗುವ ವಿಚಾರಗಳನ್ನು ಬದಿಗಿಡುವ ಕಾರ್ಯವಾಗಬೇಕು. ತ್ಯಾಗದ ಹೊರತಾಗಿ ಹೋಗುವವರಿಗೆ ಯಶಸ್ಸು ಲಭಿಸಲು ಸಾಧ್ಯವಿಲ್ಲ. ಸಾಧನೆಯನ್ನು ಮಾಡಿದವರಿಗೆ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುವ ಕಾರ್ಯವಾಗಬೇಕು ಎಂದರು.

ವಿದ್ಯಾರ್ಥಿ ಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ವಹಿಸಿದ್ದರು.

ಆಡಳಿತ ಮಂಡಳಿ ಸದಸ್ಯರಾದ ಪದ್ಮಯ್ಯ ಗೌಡ, ಮಂಗೇಶ್ ಭಟ್, ವಿದ್ಯಾರ್ಥಿ ನಾಯಕ ಪ್ರೀತೇಶ್, ಉಪಾಧ್ಯಕ್ಷ ಲವೀಶ್ ಶೆಟ್ಟಿ, ಕಾರ್ಯದರ್ಶಿ ತಸ್ಲೀಯ, ಜತೆ ಕಾರ್ಯದರ್ಶಿ ಪಲ್ಲವಿ ಪಾದೇಕಲ್ಲು ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲ ಆದರ್ಶ್ ಚೊಕ್ಕಾಡಿ ಸ್ವಾಗತಿಸಿದರು. ಉಪನ್ಯಾಸಕಿ ಚಂದ್ರಕಲಾ ಪ್ರಸ್ತಾವನೆಗೈದರು. ಉಪನ್ಯಾಸಕ ಚಂದ್ರಕಾಂತ್ ವಂದಿಸಿದರು. ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *