ರೆಮಲ್‌ ಆರ್ಭಟ ಜೋರು: ಕೇರಳದಲ್ಲಿ ಭಾರೀ ಮಳೆಗೆ ಆರೆಂಜ್‌ ಅಲರ್ಟ್‌ ಘೋಷಣೆ

Share with

ತಿರುವನಂತಪುರ: ಈಶಾನ್ಯ ಭಾರತದಲ್ಲಿ ರೆಮಲ್‌ ಚಂಡ ಮಾರು ತದ ಅವಾಂತರ ಮುಂದು ವರಿದಿದ್ದು, ಇತ್ತ ಕೇರಳದಲ್ಲೂ ವರುಣನ ಆರ್ಭಟ ಹೆಚ್ಚಾಗಿದೆ. ಸತತ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ತಿರುವನಂತಪುರ ತತ್ತರಿ ಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕಟ್ಟಕ್ಕಾಡದಲ್ಲಿ ಕೋಳಿ ಫಾರ್ಮ್ಗೆ ನೀರು ನುಗ್ಗಿ 5,000 ಕೋಳಿಗಳು ಸಾವನ್ನಪ್ಪಿವೆ. ಕೊಲ್ಲಮ್‌, ಪತ್ತನಂತಿಟ್ಟ, ಆಳಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, 7 ಜಿಲ್ಲೆಗಳಿಗೂ ಐಎಂಡಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಮಣಿಪುರದಲ್ಲಿಯೂ ಮಳೆಯಿಂದ 4,000ಕ್ಕೂ ಅಧಿಕ ಮಂದಿಗೆ ತೊಂದರೆಯಾಗಿದೆ.


Share with

Leave a Reply

Your email address will not be published. Required fields are marked *