ಉಪ್ಪಳ: ಎರಡು ಗೋಣಿ ಚೀಲದಲ್ಲಿ ತುಂಬಿದ ತ್ಯಾಜ್ಯವನ್ನು ನುಡುರಸ್ತೆಯಲ್ಲಿ ಉಪೇಕ್ಷಿಸಿದ ಘಟನೆ ನಡೆದಿದೆ. ಶಾಂತಿಗುರಿ-ಕುಬಣೂರು ಸುವರ್ಣಗಿರಿ ಹೊಳೆ ಸಮೀಪದ ರಸ್ತೆಯಲ್ಲಿ ಉಪೇಕ್ಷಿಸಲಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಜ.20ರಂದು ಹಾಡುಹಗಲೇ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ. ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯ ಹೊಂದಿದ ಎರಡು ಗೋಣಿವನ್ನು ಉಪೇಕ್ಷಿಸಲಾಗಿದೆ. ಇದರಿಂದ ಈ ಪರಿಸರದ ಕ್ಷೇತ್ರ, ಮಸೀದಿ ಸಹಿತ ವಿವಿಧ ಕಡೇ ಸಂಚರಿಸುವ ಜನರಿಗೆ ಸಮಸ್ಯೆ ಉಂಟಾಗಿದೆ. ಬಳಿಕ ತ್ಯಾಜ್ಯವನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ.
ವರ್ಷಗಳ ಹಿಂದೆ ಇದೇ ರಸ್ತೆಯ ಸಮೀಪವಿರುವ ಸುವರ್ಣಗಿರಿ ಹೊಳೆಯಲ್ಲಿ ಭಾರೀ ಪ್ರಮಾಣದ ಆಹಾರ ಸಹಿತ ವಿವಿಧ ತ್ಯಾಜ್ಯವನ್ನು ಹಲವಾರು ಗೋಣಿ ಚೀಲದಲ್ಲಿ ತಂದು ನೀರಿಗೆ ಸುರಿದ ಘಟನೆ ನಡೆದಿತ್ತು. ಈ ರಸ್ತೆ ಹಾಗೂ ಹೊಳೆಗೆ ನಿರಂತರ ತ್ಯಾಜ್ಯ ಸುರಿಯುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಸಿ.ಸಿ ಕ್ಯಾಮರ ಅಳವಡಿಸಿ ತ್ಯಾಜ್ಯ ಉಪೇಕ್ಷಿಸುವವರ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.