
ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ ಮತ್ತು ಬೊಜ್ಜು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಔಷಧ ಕಂಪನಿ ಎಲಿ ಲಿಲ್ಲಿ ಹೊಸ ಔಷಧವನ್ನು ಬಿಡುಗಡೆ ಮಾಡಿದೆ. ಇಂಜೆಕ್ಷನ್ ರೂಪದಲ್ಲಿರುವ ಇದರ ಹೆಸರು ಮೊಂಜಾರೊ ಎಂದು. ಇದರ 2.5 ಮಿಗ್ರಾಂ ಬಾಟಲಿಯ ಬೆಲೆ 3,500 ರೂ. ಮತ್ತು 5 ಮಿಗ್ರಾಂ ಬಾಟಲಿಯ ಬೆಲೆ 4,375 ರೂ. ದರ ನಿಗದಿಪಡಿಸಲಾಗಿದೆ.

ಇನ್ನು ಔಷಧಿಯು ದೇಹದಲ್ಲಿ ಎರಡು ಪ್ರಮುಖ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ, ಅವುಗಳೆಂದರೆ GIP (ಗ್ಲೂಕೋಸ್-ಅವಲಂಬಿತ ಇನ್ಸುಲಿನೋಟ್ರೋಪಿಕ್ ಪೆಪ್ಟೈಡ್) ಮತ್ತು GLP-1 (ಗ್ಲುಕಗನ್ ತರಹದ ಪೆಪ್ಟೈಡ್-1). ಈ ಹಾರ್ಮೋನುಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ವಿಶೇಷವಾಗಿ ಟೈಪ್-2 ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆಗಾಗಿ ಬಳಸಲಾಗುತ್ತದೆ. 15 ಮಿಗ್ರಾಂ ಡೋಸ್ ತೆಗೆದುಕೊಂಡ ರೋಗಿಗಳು ಸರಾಸರಿ 21.8 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಕ್ಲಿನಿಕಲ್ ಪ್ರಯೋಗಗಳು ಕಂಡುಕೊಂಡಿವೆ, ಆದರೆ 5 ಮಿಗ್ರಾಂ ಡೋಸ್ ತೆಗೆದುಕೊಂಡವರು 15.4 ಕೆಜಿ ತೂಕ ಇಳಿಸಿಕೊಂಡಿದ್ದಾರೆ.




