ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ಭಾರತೀಯ ಭಕ್ಷ್ಯಗಳಲ್ಲಿ ಮತ್ತು ಚೈನೀಸ್ ಭಕ್ಷ್ಯಗಳಲ್ಲಿ ಕ್ಯಾರೆಟ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದರಲ್ಲೂ ಸಲಾಡ್ ಅಥವಾ ಹಲ್ವಾ ತಯಾರಿಕೆಗೆ ಕ್ಯಾರೆಂಟ್ ಹೆಚ್ಚಾಗಿ ಬಳಸಲಾಗುತ್ತದೆ.

ಕ್ಯಾರೆಟ್ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳಿಂದ ಸಮೃದ್ಧವಾಗಿದೆ. ಆದ್ದರಿಂದ ನಾವು ಇದನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಿದರೆ, ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುವಂತಹ ಅನೇಕ ಪ್ರಯೋಜನಗಳನ್ನು ನಾವು ಪಡೆಯುತ್ತೇವೆ
ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಮಕ್ಕಳಲ್ಲಿ ಅಕ್ಷಿಪಟಲದ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾರೆಟ್ನಲ್ಲಿರುವ ಬೀಟಾ ಕೆರೊಟಿನ್ ದೃಷ್ಟಿಯನ್ನು ಉತ್ತಮ ಹಾಗೂ ತೀಕ್ಷ್ಣಗೊಳಿಸಲು ಸಹಕಾರಿ.
ಕ್ಯಾರೆಟ್ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಸೂರ್ಯನ ಕಿರಣಗಳಿಂದ ನಮ್ಮ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಿಸುತ್ತದೆ.
ಕ್ಯಾರೆಟ್ನಲ್ಲಿರುವ ಅಧಿಕ ಡಯೆಟರಿ ಫೈಬರ್, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.




