ಇರಾನ್ನ ಹೊಸ ಸುಪ್ರೀಂ ನಾಯಕ ಮುಜ್ತಾಬಾ ಖಮೇನಿಯ ಆಸ್ತಿ ಎಷ್ಟು?

Share with

ನವದೆಹಲಿ, ಮಾರ್ಚ್ 4: ಇರಾನ್‌ನ ತಜ್ಞರ ಸಭೆಯು ಹತ್ಯೆಗೀಡಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ (Ayatollah Ali Khamenei) ಎರಡನೇ ಮಗ 56 ವರ್ಷದ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಇರಾನ್ ದೇಶದ ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿದೆ. ಮೊಜ್ತಾಬಾ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿದೆ. ಇರಾನ್‌ನ ತಜ್ಞರ ಸಭೆಯು ರೆವಲ್ಯೂಷನರಿ ಗಾರ್ಡ್ಸ್‌ನ ಒತ್ತಡದ ಮೇರೆಗೆ ಮೊಜ್ತಾಬಾ ಅವರನ್ನು ಆಯ್ಕೆ ಮಾಡಿದೆ ಎಂದು ಕೂಡ ಹೇಳಲಾಗುತ್ತಿದೆ.

ಮೊಜ್ತಾಬಾ ಅವರನ್ನು ಸಂಭಾವ್ಯ ಉತ್ತರಾಧಿಕಾರಿ ಎಂದು ಬಹಳ ಹಿಂದಿನಿಂದಲೂ ಪರಿಗಣಿಸಲಾಗಿದ್ದರೂ, ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕಳೆದ ವರ್ಷ ಸಿದ್ಧಪಡಿಸಲಾದ ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ತನ್ನ ಮಗನ ಹೆಸರನ್ನು ಸೇರಿಸಿರಲಿಲ್ಲ. ಇರಾನ್‌ನ ಶಿಯಾ ಪಾದ್ರಿಗಳ ಸಂಪ್ರದಾಯದಲ್ಲಿ ತಂದೆಯ ಬಳಿಕ ಮಗ ಉತ್ತರಾಧಿಕಾರಿಯಾಗುವುದನ್ನು ಸಾಮಾನ್ಯವಾಗಿ ನೆಗೆಟಿವ್ ಎಂದು ಪರಿಗಣಿಸಲಾಗುತ್ತದೆ.

ಸಾರ್ವಜನಿಕ ಹುದ್ದೆಯನ್ನು ಎಂದಿಗೂ ಹೊಂದಿರದ ಮತ್ತು ಉನ್ನತ ದರ್ಜೆಯ ಧರ್ಮಗುರು ಅಲ್ಲದ ಮೊಜ್ತಬಾ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾನಿನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು IRGCಯೊಂದಿಗಿನ ನಿಕಟ ಸಂಪರ್ಕಗಳಿಗೆ ಹೆಸರುವಾಸಿಯಾಗಿದ್ದಾರೆ.

ಮೊಜ್ತಬಾ ಖಮೇನಿಯವರ ಆಸ್ತಿ ಎಷ್ಟು?:

ಮೊಜ್ತಾಬಾ ಅವರ ನಿಖರವಾದ ಆಸ್ತಿಯ ಬಗ್ಗೆ ತಿಳಿದಿಲ್ಲವಾದರೂ ವಿವಿಧ ವರದಿಗಳು ಅವರು ಬಹು-ಮಿಲಿಯನೇರ್ ಎಂದು ಸೂಚಿಸುತ್ತವೆ. ಅವರು ವಿಶಾಲ ಹೂಡಿಕೆ ಜಾಲವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಸ್ವಿಸ್ ಬ್ಯಾಂಕ್ ಖಾತೆಗಳು ಮತ್ತು 138 ಮಿಲಿಯನ್‌ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ಬ್ರಿಟಿಷ್ ಐಷಾರಾಮಿ ಆಸ್ತಿಯನ್ನು ಹೊಂದಿದ್ದಾರೆ.

ಮೊಜ್ತಾಬಾ ಅವರು ಹಿರಿಯ ಸಂಪ್ರದಾಯವಾದಿ ರಾಜಕಾರಣಿ ಮತ್ತು ಇರಾನ್ನ ಮಾಜಿ ಸಂಸತ್ ಅಧ್ಯಕ್ಷ ಘೋಲಮ್-ಅಲಿ ಹದ್ದದ್-ಅಡೆಲ್ ಅವರ ಪುತ್ರಿ ಜಹ್ರಾ ಹದ್ದದ್-ಅಡೆಲ್ ಅವರನ್ನು ವಿವಾಹವಾದರು. ಈ ದಂಪತಿಗಳು 2004ರಲ್ಲಿ ವಿವಾಹವಾದರು. ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಯ ಸಮಯದಲ್ಲಿ ಜಹ್ರಾ 2026ರಲ್ಲಿ ಕೊಲ್ಲಲ್ಪಟ್ಟರು. ಅವರಿಗೆ ಮೂರು ಮಕ್ಕಳಿದ್ದಾರೆ.


Share with

Leave a Reply

Your email address will not be published. Required fields are marked *