ನಾಗ್ಪುರದ ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್ವಾಲಾ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್ ಆಗಿದ್ದು, ಇದೀಗ ಆತ ಒಂದು ಈವೆಂಟ್ನಲ್ಲಿ ಭಾಗಿಯಾಗಲು ಪಡೆಯುವ ಸಂಭಾವಣೆ ಕುರಿತ ವಿಡಿಯೋವೊಂದು ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೈದರಾಬಾದ್‌ನಲ್ಲಿ ಡಾಲಿಯ ಚಹಾದ ಅಂಗಡಿಗೆ ಭೇಟಿ ನೀಡಿದ ಬಳಿಕ ಈತ ವಿಶ್ವದಾದ್ಯಂತ ಪರಿಚಯವಾದ. ಇದೀಗ ಈತ ದೇಶ ವಿದೇಶದಾದ್ಯಂತ ಈವೆಂಟ್ಗಳಲ್ಲಿ ಭಾಗಿಯಾಗುತ್ತಿದ್ದು, ಒಂದು ಈವೆಂಟ್ಗೆ ಲಕ್ಷಾಂತರ ಹಣವನ್ನು ಪಡೆಯುತ್ತಿರುವುದಾಗಿ ವರದಿಯಾಗಿದೆ.
ಇತ್ತೀಚಿಗಷ್ಟೇ ಫುಡ್ ಬ್ಲಾಗರ್ ಒಬ್ಬ brewwithabdu ಎಂಬ ಇನ್ಸ್ಟಾಗ್ರಾಮ್ ಖಾತೆಯ ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ಡಾಲಿ ಚಾಯ್‌ವಾಲಾ ಪಡೆಯುವ ಸಂಭಾವಣೆಯ ಕುರಿತು ಬಹಿರಂಗಪಡಿಸಿದ್ದಾರೆ. ಈ ಫುಡ್ ಬ್ಲಾಗರ್ ಕುವೈಟ್ನ ಒಂದು ಕಾರ್ಯಕ್ರಮಕ್ಕೆ ಡಾಲಿಯನ್ನು ಆಹ್ವಾನಿಸಿದ್ದು, ಈತ ಈವೆಂಟ್ನಲ್ಲಿ ಭಾಗಿಯಾಗಲು ಬರೋಬ್ಬರೀ 5ಲಕ್ಷ ರೂ. ನಗದು ಜೊತೆಗೆ ತಂಗಲು 5ಸ್ಟಾರ್ ಹೊಟೇಲ್ ವ್ಯವಸ್ಥೆಗೆ ಬೇಡಿಕೆ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಚಹಾ ಮಾರಾಟಗಾರ ಡಾಲಿ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 4.6 ಮಿಲಿಯನ್ ಅಂದರೆ 40ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾನೆ. ಇದಲ್ಲದೇ ಯೂಟ್ಯೂಬ್ನಲ್ಲಿ 20ಲಕ್ಷಕ್ಕೂ ಅಧಿಕ ಸಬ್ಸ್ಕೈಬರ್ ಇದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದಿಸುವುದರ ಜೊತೆಗೆ ಈವೆಂಟ್ಗಳಿಗೂ ಬರೋಬ್ಬರಿ 5ಲಕ್ಷ ಬೇಡಿಕೆ ಇಟ್ಟಿರುವುದು ಬಹಿರಂಗವಾಗಿದೆ.