ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

Share with

ದೇವರಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಇರಿಸಿ ಕಳಶ ಇಡುವುದು ಸಂಪ್ರದಾಯ. ಆದರೆ, ಅನೇಕರಿಗೆ ಕಳಶಕ್ಕೆ ಇರಿಸಿದ ತೆಂಗಿನ ಕಾಯಿಯನ್ನು ಪೂಜೆಯ ನಂತರ ಏನು ಮಾಡಬೇಕು ಎಂಬ ಮಾಹಿತಿ ಇರುವುದಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

ಕಳಶಕ್ಕೆ ಇಟ್ಟ ತೆಂಗಿನಕಾಯಿ ದೈವ ಸ್ವರೂಪದ್ದಾಗಿರುತ್ತದೆ.

ದೇವರ ಪೂಜೆಗೆ ಇಟ್ಟ ತೆಂಗಿನ ಕಾಯಿಯನ್ನು ಕಳಶ ವಿಸರ್ಜನೆ ಮಾಡಿದ ಬಳಿಕ ಮಾಂಸದ ಅಡುಗೆಗೆ ಬಳಸಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ.

ಕಳಶಕ್ಕೆ ಇರಿಸಿದ ತೆಂಗಿನಕಾಯಿಯನ್ನು ಸಿಹಿ ಪದಾರ್ಥಕ್ಕೆ ಬಳಸುವುದು ಶ್ರೇಷ್ಠ. ಹಾಗೂ ತಯಾರಿಸಿದ ಸಿಹಿ ಪದಾರ್ಥಗಳನ್ನು ಎಲ್ಲರಿಗೂ ಹಂಚುವುದರಿಂದ ಶುಭವಾಗಲಿದೆ ಎಂದು ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.

ಕಳಶಕ್ಕೆ ಇಡುವ ತೆಂಗಿನಕಾಯಿ ಪೂರ್ಣ ಪ್ರಮಾಣದಲ್ಲಿ ಒಣಗಿರಬಾರದು. ಅಂತಹ ತೆಂಗಿನ ಕಾಯಿಯನ್ನು ಕಳಶಕ್ಕೆ ಇಟ್ಟರೆ ಸಂಕಷ್ಟ ಎದುರಾಗುತ್ತದೆ ಎಂದು ಹೇಳಲಾಗುತ್ತದೆ.

ಪೂಜಾ ಸಮಯದಲ್ಲಿ ಕಳಶಕ್ಕಿಟ್ಟ ತೆಂಗಿನಕಾಯಿ ಬಿದ್ದರೆ ಅರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.

ಜ್ಯೋತಿಷದ ಪ್ರಕಾರ ಪೂಜಾ ಸಮಯದಲ್ಲಿ ತೆಂಗಿನ ಕಾಯಿ ಬಿರುಕು ಬಿಟ್ಟರೆ ಮನೆಯ ಸದಸ್ಯರಿಗೆ ಅಪಘಾತವಾಗುವ ಸಾಧ್ಯತೆ ಇರುತ್ತದೆ ಎಂಬ ನಂಬಿಕೆಯೂ ಇದೆ.

ಕಳಶಕ್ಕೆ ಇಡುವ ತೆಂಗಿನಕಾಯಿಯಲ್ಲಿ ನೀರು ಇಲ್ಲದಿದ್ದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುವುದಿಲ್ಲ ಅಥವಾ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ.


Share with

Leave a Reply

Your email address will not be published. Required fields are marked *