ಹೊಸದಿಲ್ಲಿ: ಮೆಟಾ-ಮಾಲೀಕತ್ವದ ಮೆಸೆಂಜಿಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಇದೀಗ ಚಾಟಿಂಗನ್ನು ಹೆಚ್ಚು ಆಸಕ್ತಿದಾಯಕವಾಗಿಸಲು ಯಾವಾಗಲೂ ಹೊಸ ಫೀಚರ್ ಗಳನ್ನು ಸೇರಿಸುತ್ತಲೇ ಇರುತ್ತದೆ. ಇನ್ನು ವಾಟ್ಸಾಪ್ ನಲ್ಲಿ ಚಾಟ್ ತೆರೆಯುವಾಗ ಪ್ರೊಫೈಲ್ ಚಿತ್ರವನ್ನು ಮಾತ್ರವಲ್ಲದೆ ಕವರ್ ಫೋಟೋವನ್ನು ಸಹ ನೋಡಬಹುದು.

ಫೀಚರ್ ಟ್ರ್ಯಾಕರ್ WABetaInfo ನ ಪೋಸ್ಟ್ ಪ್ರಕಾರ, ಫೇಸ್‌ಬುಕ್ ಮತ್ತು ಲಿಂಕ್ಸ್‌ಇನ್‌ನಂತೆಯೇ, ವಾಟ್ಸಾಪ್ ಹೊಸ ಪ್ರೊಫೈಲ್ ಫಿಚರ್ ಮೇಲೆ ಕೆಲಸ ಮಾಡುತ್ತಿದ್ದು, ಹೊಸ ವೈಶಿಷ್ಟ್ಯವನ್ನು ಜನರಿಗೆ ಪರಿಚಯಿಸಲಿದೆ.
ಈ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಪ್ರೊಫೈಲ್ ಗೆ ಕವರ್ ಫೋಟೋವನ್ನು ಸೇರಿಸಲು ಅವಕಾಶ ನೀಡಬಹುದು. ವಾಟ್ಸಾಪ್ ಈ ಫೀಚರ್ ಪರಿಚಯಿಸಿದರೆ, ಜನರು ತಮ್ಮನ್ನು ತಾವು ಉತ್ತಮವಾಗಿ ಪ್ರೆಸೆಂಟ್ ಮಾಡಿಕೊಳ್ಳಲು ಮತ್ತು ಪ್ರೊಫೈಲ್‌ಗಳನ್ನು ಹೆಚ್ಚು ಆಕರ್ಷಕವಾಗಿಸಲು ಸಹಾಯ ಮಾಡುತ್ತದೆ. ಪ್ರೊಫೈಲ್ ಚಿತ್ರಗಳು ಮತ್ತು ಕವರ್ ಫೋಟೋಗಳು ಸಾಮಾಜಿಕ ಜಾಲತಾಣ ಖಾತೆಗಳನ್ನು ಪರ್ಸನಲೈಸ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಲ್ಲಿಯವರೆಗೆ, ಕವರ್ ಫೋಟೋಗಳು ವಾಟ್ಸಾಪ್ ಬ್ಯುಸಿನೆಸ್ ಖಾತೆಗಳಿಗೆ ಸೀಮಿತವಾಗಿತ್ತು.
ಇದೀಗ ಅತ್ಯಂತ ಪ್ರಸಿದ್ದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈಗ ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗೆ ತರುವಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಪ್ರತಿಯೊಬ್ಬರೂ ತಮ್ಮ ಪ್ರೊಫೈಲ್‌ಗಳನ್ನು ಹೆಚ್ಚು ಅಭಿವ್ಯಕ್ತಿಶೀಲ ರೀತಿಯಲ್ಲಿ ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ. ವರದಿಗಳ ಪ್ರಕಾರ, ಈ ವೈಶಿಷ್ಟ್ಯವು ಅಪ್ಲಿಕೇಶನ್‌ನ IOS ಮತ್ತು Android ಆವೃತ್ತಿಗಳಿಗೆ ಅಭಿವೃದ್ಧಿ ಹಂತದಲ್ಲಿದೆ ಮತ್ತು ಪರೀಕ್ಷಾ ಹಂತದಲ್ಲಿದೆ.
ಈ ಹೊಸ ಫೀಚರ್ ಪ್ರೊಫೈಲ್ ವಿಭಾಗದಲ್ಲಿ ಹೊಸ ಸ್ಥಳವನ್ನು ಪರಿಚಯಿಸುತ್ತದೆ, ಅಲ್ಲಿ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಪ್ರೊಫೈಲ್ ವಿವರಗಳ ಮೇಲೆ ಅಗವಾದ ಚಿತ್ರವನ್ನು ಸೇರಿಸಬಹುದು. ಈ ಕವರ್ ಫೋಟೋ ಪ್ರೊಫೈಲ್ ಚಿತ್ರ, ಹೆಸರು ಮತ್ತು ಎಬೌಟ್ ವಿಭಾಗದ ಮೇಲೆ ಕಾಣಿಸಿಕೊಳ್ಳುತ್ತದೆ, ಬಳಕೆದಾರರು ತಮ್ಮ ಫೋನ್‌ನ ಗ್ಯಾಲರಿಯಿಂದ ನೇರವಾಗಿ ಚಿತ್ರವನ್ನು ಆಯ್ಕೆ ಮಾಡಲು ಮತ್ತು ಅವರು ಬಯಸಿದಾಗಲೆಲ್ಲಾ ಅದನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ.




