ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಬ್ಬಿದ್ದ ಕರ್ನಾಟಕದ ಸ್ಥಳಗಳಿವು

Share with

1947, ಆಗಸ್ಟ್‌ 15 ರಂದು ಭಾರತವು 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸುಲಭದಲ್ಲಿ ಸಿಗಲಿಲ್ಲ. ಅದಕ್ಕಾಗಿ ಹೋರಾಡಿ ಮಡಿದ ಅದೆಷ್ಟೋ ದೇಶಭಕ್ತರ ತ್ಯಾಗವು ಅಡಗಿದೆ. ಹೀಗಾಗಿ ಈ ದಿನದಂದು ರಾಷ್ಟ್ರಧ್ವಜವನ್ನು ಹಾರಿಸಿ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಅವರಿಗೆ ಗೌರವ ಸಲ್ಲಿಸುವ ದಿನವಾಗಿದೆ. ದೇಶಾದ್ಯಂತ ದೇಶಪ್ರೇಮಿಗಳು ಈ ಬಾರಿ ಆಗಸ್ಟ್ 15 ರಂದು 78 ನೇ ಸ್ವಾತಂತ್ರೋತ್ಸವವನ್ನು ಆಚರಿಸಲು ಸಜ್ಜಾಗಿದ್ದಾರೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ

ಅಂದು ಜುಲೈ 4, 1947 ರಂದು, ಭಾರತೀಯ ಸ್ವಾತಂತ್ರ್ಯ ಮಸೂದೆಯನ್ನು ಬ್ರಿಟಿಷ್ ಹೌಸ್ ಆಫ್ ಕೊಲೊನಿಯಲ್​ನಲ್ಲಿ ಪರಿಚಯಿಸಲಾಯಿತು. ಜುಲೈ ತಿಂಗಳ 18 ರಂದು ಆ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆ ಕಾಯ್ದೆಯು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಮುಖ್ಯ ಕಾರಣವಾಯಿತು. ಕೆಲವೇ ದಿನಗಳ ಬಳಿಕ ಅಂದರೆ 1947 ಆಗಸ್ಟ್ 15 ರಂದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ದೆಹಲಿಯ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು. ಭಾರತವನ್ನು ಅಧಿಕೃತವಾಗಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದರು. ಈ ವೇಳೆಯಲ್ಲಿ ಮಹಾತ್ಮಾ ಗಾಂಧಿ, ಭಗತ್ ಸಿಂಗ್, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತರಾಗಲು ಹೋರಾಡಿದರು. ಈ ವೇಳೆಯಲ್ಲಿ ಅನೇಕರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿಕೊಂಡರು.

ಸ್ವಾತಂತ್ರ್ಯ ದಿನಾಚರಣೆಯ ಮಹತ್ವ

ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ನಾವು ಈ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರನ್ನು ಗೌರವಿಸಬೇಕಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು, ಭಾರತದ ಪ್ರಧಾನಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಾವು ಕೂಡ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದ ನಾಗರಿಕರು ವಿವಿಧ ಕಡೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.

ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಕರ್ನಾಟಕದ ಸ್ಥಳಗಳು

  • ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿಯ ಹೆಸರು ಮೊದಲಿರುತ್ತದೆ. ಚನ್ನಪ್ಪ ವಾಲಿ, ಅಣ್ಣು ಗುರೂಜಿ, ಗಂಗಾಧರ ರಾವ್‌ ದೇಶಪಾಂಡೆಯಂಥವರು ಸ್ವಾತಂತ್ರ್ಯ ಹೋರಾಟದಲ್ಲಿ ಸದಾ ಸಕ್ರಿಯರಾಗಿದ್ದರು. ಈ ಪ್ರದೇಶದಲ್ಲಿ ಬ್ರಿಟಿಷರನ್ನು ದೇಶದಿಂದ ಓಡಿಸಲು ಅನೇಕ ಸಮಾವೇಶಗಳು ನಡೆದಿತ್ತು. ಅನೇಕ ಬಾರಿ ಬೆಳಗಾವಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಭೇಟಿ ನೀಡಿದ್ದರು.
  • ಬ್ರಿಟಿಷರ ದಾಸ್ಯದಿಂದ ಮುಕ್ತರಾಗಲು ಮೈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟವು ತೀವ್ರವಾಗಿತ್ತು. ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ಬ್ರಿಟಿಷರ ಕಾಲದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಳಿಗೆ ಸಾಕ್ಷಿಯಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಎನ್ನುವುದಕ್ಕೆ ಇಲ್ಲಿನ ಅನೇಕ ಸ್ಥಳಗಳು ಸಾಕ್ಷಿಯನ್ನು ಒದಗಿಸುತ್ತದೆ.
  • ಸ್ವಾತಂತ್ರ್ಯ ಹೋರಾಟಕ್ಕೆ ಮುಖ್ಯ ಭೂಮಿಕೆಯಾಗಿದ್ದು ಮಂಗಳೂರು. ಮಹಾತ್ಮಾ ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಹೋದ ಕರ್ನಾಟಕದ ಮಂದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಾರ್ನಾಡ್‌ ಸದಾಶಿವ ರಾವ್‌ ಮೊದಲಿಗರಾಗಿದ್ದರು. ಹೀಗಾಗಿ ಮಂಗಳೂರಿನ ಕೆ ಎಸ್‌ ರಸ್ತೆಗೆ ಕಾರ್ನಾಡ್ ಸದಾಶಿವ ರಾವ್‌ ಎನ್ನುವ ಹೆಸರಿಡಲಾಗಿದೆ.
  • ಕರ್ನಾಟಕದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಸ್ಥಳವೆಂದರೆ ಅದುವೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. 1930ರಲ್ಲಿ ಮಹಾತ್ಮಾ ಗಾಂಧಿಯವರು ದಂಡಿಯಾತ್ರೆಯು ಪೂರ್ಣಗೊಂಡ ಬಳಿಕ ಕರ್ನಾಟಕದಲ್ಲಿದ್ದ ಕಾಂಗ್ರೆಸ್ಸಿಗರು ಕರಾವಳಿ ಭಾಗದಲ್ಲಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದರು. ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಕೌಜಲಗಿ ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲವನ್ನು ಆಯ್ಕೆ ಮಾಡಿದರು. ಈ ಸ್ಥಳವು ಹಲವಾರು ಹೋರಾಟಕ್ಕೆ ಸಾಕ್ಷಿಯಾಗಿದ್ದು ಈ ಸ್ಥಳವನ್ನು ಕರ್ನಾಟಕದ ಬಾರ್ಡೋಲಿ ಹೆಸರಿನಿಂದ ಕರೆಯಲಾಗುತ್ತದೆ.
  • ಬ್ರಿಟಿಷರ ವಿರುದ್ದ ಹೋರಾಟಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಕಲಾರ ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ ಕೂಡ ಒಂದು. ಬ್ರಿಟಿಷ್ ಸರ್ಕಾರವು 1938ರ ಏಪ್ರಿಲ್‌ 25ರಂದು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗೋಲೀಬಾರ್‌ ನಡೆಸಲಾಯಿತು. ಆ ಸಮಯದಲ್ಲಿ ಸುಮಾರು 35ಕ್ಕೂ ಅಧಿಕ ದೇಶಭಕ್ತರು ಪ್ರಾಣವನ್ನು ಅರ್ಪಿಸಿದರು. ಆ ನೆನಪಿಗಾಗಿ ಇಲ್ಲಿ 1973ರಲ್ಲಿ ಹುತಾತ್ಮರ ಸ್ಮಾರಕವನ್ನು ನಿರ್ಮಿಸಲಾಯಿತು.

Share with

Leave a Reply

Your email address will not be published. Required fields are marked *