ಚಂಡೀಗಢ: ಐಪಿಎಲ್ 2025ರ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಇನ್ನು ಪ್ಲೇ ಆಫ್ ಆಟಗಳು ಬಾಕಿ ಇದೆ. ಗುರುವಾರ ನ್ಯೂಚಂಡೀಗಢದ ಮುಲ್ಲನ್ ಪುರದಲ್ಲಿ ನಡೆಯುವ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.


ಶುಕ್ರವಾರ (ಮೇ 30) ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿದೆ. ಈ ಪಂದ್ಯವೂ ನ್ಯೂಚಂಡೀಗಢದ ಮುಲ್ಲನ್ ಪುರದಲ್ಲಿ ನಡೆಯಲಿದೆ.
ಸೋಮವಾರ ಮುಂಬೈ ಇಂಡಿಯನ್ಸ್ (MI) ತಂಡವನ್ನು ಸೋಲಿಸುವ ಮೂಲಕ ಪಂಜಾಬ್ ಅಗ್ರ ಸ್ಥಾನ ಪಡೆದುಕೊಂಡಿತು, ನಂತರ ಮಂಗಳವಾರ ನಡೆದ ಐಪಿಎಲ್ 2025 ರ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ಷ್ಮೀ ಸೂಪರ್ ಜೈಂಟ್ಸ್ (LSG) ವಿರುದ್ಧ ಅದ್ಭುತ ಜಯ ಸಾಧಿಸಿದ ನಂತರ ಆರ್ ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಗೆ ಸ್ಥಾನ ಪಡೆದಿದೆ. ಎರಡೂ ತಂಡಗಳು 14 ಪಂದ್ಯಗಳಿಂದ 19 ಅಂಕಗಳೊಂದಿಗೆ ಲೀಗ್ ಹಂತ ಮುಗಿಸಿದವು, ಪಂಜಾಬ್ ಕಿಂಗ್ಸ್ ತಂಡವು ಉತ್ತಮ ನಿವ್ವಳ ರನ್-ರೇಟ್‌ನಿಂದ ಅಗ್ರಸ್ಥಾನದಲ್ಲಿದೆ.
ಆದಾಗ್ಯೂ, ಪಂದ್ಯ ಮಳೆಯಿಂದ ರದ್ದಾದರೆ ಕ್ವಾಲಿಫೈಯರ್ 1 ಕ್ಕೆ ಯಾವುದೇ ಮೀಸಲು ದಿನ ಇಟ್ಟಿಲ್ಲ. ಹಾಗಾದರೆ, ಮುಲ್ಲನ್‌ಪುರದಲ್ಲಿ ಮಳೆ ಅಡ್ಡಿಪಡಿಸಿದರೆ ಎಂಬ ಮಾಹಿತಿ ಇಲ್ಲಿದೆ.
ಒಂದು ವೇಳೆ ಗುರುವಾರದ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಪಂದ್ಯ ರದ್ದಾದರೆ, ಅದರ ಲಾಭ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಿಗಲಿದೆ. ಅವರು ಲೀಗ್ ಹಂತದಲ್ಲಿ ಅಗ್ರ ಸ್ಥಾನದಲ್ಲಿರುವ ಕಾರಣ ಇಂದಿನ ಪಂದ್ಯ ರದ್ದಾದರೆ ಪಂಜಾಬ್ ಫೈನಲ್ ತಲುಪಲಿದೆ.




