ಮಗುವಿನ ಬಯೋಮೆಟ್ರಿಕ್ ಅಪ್‌ಡೇಟ್ ಅನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ರೆ UIDAI ನಿಮ್ಮ ಮಗುವಿನ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವ ಅಧಿಕಾರ ಹೊಂದಿದೆ.

ಅಪ್‌ಡೇಟ್ ಆಗಿರದ ಆಧಾರ್ ಇಲ್ಲದೆಯೇ, ಮಗುವಿಗೆ ಶಾಲಾ ಪ್ರವೇಶ, ಪರೀಕ್ಷಾ ನೋಂದಣಿ, ವಿದ್ಯಾರ್ಥಿವೇತನ, ಸಬ್ಸಿಡಿ ಅಥವಾ DBTನಂತಹ ಯಾವುದೇ ಸರ್ಕಾರಿ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಯೊಂದು ಸರ್ಕಾರಿ ಯೋಜನೆಗೆ ಮಾನ್ಯತೆ ಪಡೆಯಲು ಅಪ್‌ಡೇಟ್ ಆಗಿರುವ ಆಧಾರ್ ಕಾರ್ಡ್ ಅಗತ್ಯ ಎಂದು UIDAI ತಿಳಿಸಿದೆ.




