ಕಾರು ಕದ್ದು “I am Sorry” ಎಂದಿದ್ದೇಕೆ ಕಿಲಾಡಿ? ಕಾರು ಕದ್ದರೂ ಆತ್ಮಸಾಕ್ಷಿ ಮರೆಯದ ಕಳ್ಳ..!!

Share with




ಕಳ್ಳರ ಕೈಗೆ ಒಂದು ಬಾರಿ ಅನ್ಯರ ವಸ್ತು ಹೋದ್ರೆ ಮುಗಿತು ಅದಕ್ಕೆ ಎಳ್ಳು ನೀರು ಬಿಟ್ಟ ಹಾಗೆಯೇ. ವಾಪಸ್ ಮಾಲೀಕರ ಕೈಗೆ ಸಿಗೋದು ಹೆಚ್ಚು ಕಡಿಮೆ ಕನಸಿನ ಮಾತು ಆದ್ರೆ ರಾಜಸ್ತಾನದ, ಬಿಕನೇರ್ನಲ್ಲೊಬ್ಬ ಪ್ರಾಮಾಣಿಕ ಕಳ್ಳನೊಬ್ಬ ಸಿಕ್ಕಿದ್ದಾನೆ. ಕದ್ದ ಕಾರನ್ನು 450 ಕಿಲೋ ಮೀಟರ್ವರೆಗೂ ತೆಗೆದುಕೊಂಡು ಹೋಗಿ, ವಾಪಸ್ ಅದು ಮಾಲೀಕರಿಗೆ ಸಿಗುವಂತೆ ಒಂದು ಪೇಪರ್ನಲ್ಲಿ ಒಂದಿಷ್ಟು ನೋಟ್ಸ್ ಬರೆದು ಕಾರಿಗೆ ಅಂಟಿಸಿದ್ದಾನೆ. ಇದು ಕಳ್ಳರಿಗೂ ಅಪರೂಪಕ್ಕೆ ಆತ್ಮಸಾಕ್ಷಿ ಮಿಡಿಯುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ.

ದೆಹಲಿಯಿಂದ ಕಾರನ್ನು ಕದ್ದುಕೊಂಡು ಬಂದ ಕಳ್ಳ ರಾಜಸ್ತಾನದ ಬಿಕನೇರ್ನಲ್ಲಿ ನಿಲ್ಲಿಸಿ ಅದರ ನಂಬರ್ ಪ್ಲೇಟ್ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಕಾರು ಕದ್ದ ಕಳ್ಳನಿಗೆ ನಡುರಸ್ತೆಯಲ್ಲಿ ಪಾಪಪ್ರಜ್ಞೆ ಕಾಡಿದೆಯೋ ಏನೊ ಬಿಕನೇರ್ನ ನಪಸಾರ್ ಪಟ್ಟಣದ ಹೆದ್ದಾರಿ ಬಳಿ ಕಾರು ನಿಲ್ಲಿಸಿ ಅದರ ಮೇಲೆ ಮೂರು ಕರಪತ್ರ ಅಂಟಿಸಿ ಹೋಗಿದ್ದಾನೆ. ಮೊದಲ ಕರಪತ್ರದಲ್ಲಿ ಈ ಕಾರನ್ನು ದೆಹಲಿಯ ಪಾಲಮ್ನಿಂದ ಕದಿಯಲಾಗಿದೆ. ದಯವಿಟ್ಟು ಇದನ್ನು ಪೊಲೀಸರ ಗಮನಕ್ಕೆ ತನ್ನಿ, Sorry ಎಂದು ಬರೆಯಲಾಗಿದ್ದು, ಕಾರಿನ ನಂಬರ್ನ್ನು ಕೂಡ ಅದರ ಮೇಲೆ ಉಲ್ಲೇಖಿಸಿದ್ದಾನೆ. ಇದು ಪೊಲೀಸರಿಗೆ ಕಾರಿನ ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ.



ಮತ್ತೊಂದು ಕರಪತ್ರದಲ್ಲಿ ಐ ಲವ್ ಮೈ ಇಂಡಿಯಾ ಎಂದು ಬರೆದಿರುವ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಹೀಗೆ ಕರಪತ್ರಗಳನ್ನು ಅಂಟಿಸಿಕೊಂಡು ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.ಪೊಲೀಸರು ಕರಪತ್ರದಲ್ಲಿ ಅಂಟಿಸಲಾಗಿದ್ದ ನಂಬರ್ನ್ನು ಟ್ರೇಸ್ ಮಾಡಿ ಕಾರಿನ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದು. ಕಾರ್ ಮಾಲೀಕರು ಅಕ್ಟೋಬರ್ 10ರಂದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Share with

Leave a Reply

Your email address will not be published. Required fields are marked *