ಉಪ್ಪಳ: ಹಳದಿ ಕಾಮಲೆ ವ್ಯಾಪಕಗೊಂಡಿರುವAತೆ ಸ್ಥಳೀಯರು ಆತಂಕಗೊoಡಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಎಂ.ಎಸ್ ರೋಡ್ ಹಾಗೂ ಪರಿಸರದಲ್ಲಿ ಮಕ್ಕಳು, ಮಹಿಳೆಯರ ಸಹಿತ 15ಕ್ಕೂ ಮಿಕ್ಕು ಮಂದಿಗೆ ಹಳದಿ ಕಾಮಲೆ ಬಾಧಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಪೈಕಿ ಹಲವು ಮಂದಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇನ್ನೂಹಲವುರು ವಿಶ್ರಾಂತಿಯಲ್ಲಿದ್ದಾರೆ. ಒಂದು ಭಾರಿ ಆರೋಗ್ಯ ಇಲಾಖೆ ಭೇಟಿ ನೀಡಿ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದರು. ಆದರೆ ಇನ್ನೂ ಹರಡುವ ಭೀತಿಯಿಂದ ಸ್ಥಳೀಯರು ಆತಂಕಗೊoಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಆರಂಭಗೊoಡಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಅಟ್ಟೆಗೋಳಿ ಮದ್ರಾಸದ ಹಲವಾರು ವಿದ್ಯಾರ್ಥಿಗಳಿಗೆ ಇದೇ ರೀತಿ ಹಳದಿ ಕಾಮಲೆ ಬಾಧಿಸಿದ್ದು, ಪೈವಳಿಕೆ ಪಂಚಾಯತ್ ಹಾಗೂ ಬಾಯಾರು ಆರೋಗ್ಯ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಮಾರ್ಗಗೈದು ಗುಣಮುಖರಾಗಿದ್ದಾರೆ.
ಇದೀಗ ಬಂದ್ಯೋಡು ಎಂ.ಎಸ್ ರೋಡ್ ಪರಿಸರದಲ್ಲಿ ಕಾಯಿಲೆ ವ್ಯಾಪಕಗೊಂಡಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಔಷದಿ ಹಾಗೂ ಮಾರ್ಗದರ್ಶನವನ್ನು ನೀಡಬೇಕು, ಕಾಯಿಲೆ ಬರುವುದನ್ನು ತಡೆಯಲು ಸೂಕ್ತ ರೀತಿಯ ಕ್ರಮಕ್ಕೆ ಮುಂದಾಗಬೇಕೆoದು ಊರವರು ಒತ್ತಾಯಿಸಿದ್ದಾರೆ.