ಪತಿಯ ಅಂಗಿಯಲ್ಲಿ ಪೆನ್ನಿನಿಂದ ಗೆರೆ ಎಳೆದ ಪತ್ನಿಗೆ ಹಲ್ಲೆ..! ಪೊಲೀಸ್ ದೂರು

Share with

ಕಾಸರಗೋಡು: ಪತಿಯ ಅಂಗಿಯಲ್ಲಿ ಪೆನ್ನಿನಿಂದ ಗೆರೆ ಎಳೆದ ಪತ್ನಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪತ್ನಿಯ ದೂರಿನಂತೆ ಬೇಡಗಂ ಪೊಲೀಸರು ಪತಿ ಯಾಹ್ಯಾ ವಿರುದ್ಧ ಕೇಸು ದಾಖಲಿಸಿದ್ದಾರೆ.

ನೆಬಿ ದಿನದ ಅಂಗವಾಗಿ ಯಾಹ್ಯ ತನಗೆ ಮಾತ್ರ ಹೊಸ ವಸ್ತ್ರ ಖರೀದಿಸಿದ್ದು, ಪತ್ನಿ ಹಾಗೂ ಮಗಳಿಗೆ ಖರೀದಿಸಿರಲಿಲ್ಲ. ಇದರಿಂದಾಗಿ ಸಿಟ್ಟಿನಿಂದ ಪತ್ನಿ ನಜೀಲ, ಪತಿಯ ಹೊಸ ಅಂಗಿಯ ಮೇಲೆ ಪೆನ್ನಿನಿಂದ ಗೆರೆ ಎಳೆದರೆನ್ನಲಾಗಿದೆ.

ಇದರಿಂದ ಕುಪಿತನಾತ ಯಾಹ್ಯ ಪತ್ನಿ ನಜೀಲಳನ್ನು ಹಲ್ಲೆಗೈದಿದ್ದಾನೆ. ಪೆಟ್ಟು ತಿಂದ ನಜೀಲಾ ಬೇಡಗಂ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಯಾಹ್ಯ ವಿರುದ್ಧ ಕೇಸು ದಾಖಲಿಸಿದ್ದಾರೆ.


Share with

Leave a Reply

Your email address will not be published. Required fields are marked *