ಉಪ್ಪಳ: ಮಹಿಳೆಯೋರ್ವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಇಚ್ಲಂಗೋಡು ಕೆದ್ವಾರ್ ನಿವಾಸಿ ಸುಧಾಕರ ಶೆಟ್ಟಿರವರ ಪತ್ನಿ ಯಶೋಧ [೪೨] ಮೃತಪಟ್ಟವರು. ಭಾನುವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗುತ್ತಿದ್ದಂತೆ ಹೃದಯಘಾತ ಉಂಟಾಗಿದ್ದುಕೂಡಲೇ ಬಂದ್ಯೋಡು ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಪಟ್ಟಿದ್ದಾರೆ. ಇವರು ಇಚ್ಲಂಗೋಡು ಎ.ಎಲ್.ಪಿ ಶಾಲೆ [ಜನರಲ್] ಇದರ ಮತೃಮಂಡಳಿ ಅಧ್ಯಕ್ಷೆಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಶ್ರಾವ್ಯ, ಸನ್ವಿತ್ ಸಹೋದರ ರವೀಂದ್ರ, ಸಹೋದರಿ ಸಂಪ ಹಾಗೂ ಅಪಾರ ಸಂಭು ಬಳಗವನ್ನು ಅಗಲಿದ್ದಾರೆ. ತಂದೆ ನಾರಾಯಣ ರೈ, ತಾಯಿ ದೇವಕಿ ಈ ಹಿಂದೆ ನಿಧನರಾಗಿದ್ದಾರೆ. ಅಂತ್ಯಸoಸ್ಕಾರ ನಿನ್ನೆ ಸಂಜೆ ಮನೆ ಬಳಿಯಲ್ಲಿ ನಡೆಯಿತು.