ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ತಿರುವನಂತಪುರಕ್ಕೆ ತೆರಳುವ ರೈಲಿನಲ್ಲಿ ಸೀಟಿಗಾಗಿ ಮಹಿಳೆಯಿಂದ ಕಾದಾಟ ನಡೆದಿದೆ.
ಈ ರೈಲಿನಲ್ಲಿ ಸಂಜೆ ವೇಳೆಗೆ ಫುಲ್ ರಶ್ ಆಗುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಕೆಲಸದಿಂದ ಮನೆಗೆ ತೆರಳುತ್ತಿರುವ ಮಹಿಳೆಯರಿದ್ದಾರೆ. ಈ ಸಂದರ್ಭದಲ್ಲಿ ಒಂದೇ ಸೀಟಿನಲ್ಲಿ ಮೂವರು ಆರಾಮವಾಗಿ ಬಿದ್ದುಕೊಂಡಿದ್ದನ್ನು ಪ್ರಶ್ನಿಸಿದ್ದ ಸಹ ಪ್ರಯಾಣಿಕೆಯರನ್ನು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಏರು ಧ್ವನಿಯಲ್ಲಿ ಬಾಯಿಗೆ ಬಂದ ಹಾಗೆ ಬೈದು ಮಹಿಳೆಯರನ್ನು ಹೀಯಾಳಿಸಿದ್ದಾಳೆ. ಯಾರ ಮಾತಿಗು ಜಗ್ಗದ ಆಕೆ ಹಾಗೂ ಆಕೆಯ ಜೊತೆಯಲ್ಲಿದ್ದವರು ಉಳಿದವರನ್ನು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಇದನ್ನು ಅರಿತ ಅಲ್ಲೇ ಇದ್ದ ಪೊಲೀಸ್ ಪೇದೆಯೊಬ್ಬರು ಸಮಾಧಾನ ಮಾಡಲು ಪ್ರಯತ್ನಪಟ್ಟಿದ್ದಾರೆ. ಆದರೆ ಅವರ ಮಾತಿಗೂ ಜಗ್ಗದ ಹೆಂಗಸು ತನ್ನ ಇಬ್ಬರು ಮಕ್ಕಳನ್ನು ಸೀಟ್ ಮೇಲೆ ಕುಳ್ಳಿರಿಸಿದ್ದಾಳೆ ಪೊಲೀಸ್ ಸಿಬಂಧಿಯೊಬ್ಬರು ಸೀಟ್ ಬೇರೆಯವರಿಗೆ ಸೀಟ್ ಬಿಟ್ಟುಕೊಡುವಂತೆ ಕೇಳಿಕೊಂಡರೂ ಆಕೆ ಅವರ ಮಾತಿಗೆ ಕ್ಯಾರೆ ಅಂದಿಲ್ಲ.