ಉಪ್ಪಳ: ಉಪ್ಪಳ ಬಳಿಯ ಶಾರದಾನಗರ ನಿವಾಸಿ [ದಿ] ಸುಂದರ ಸಾಲ್ಯಾನ್ ರವರ ಪತ್ನಿ ರಾಧಾ ಶ್ರೀಯಾನ್ [82] ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಸಂಜೆ ಉಪ್ಪಳದ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಉಪ್ಪಳ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಿಯಾಗಿದ್ದರು. ಮೃತರು ಮಕ್ಕಳಾದ ಶಾಲಿನಿ, ಸಂತೋಷ್, ಸುಕನ್ಯ, ಸೊಸೆ ಅಕ್ಷತ, ಅಳಿಯ ಜಯರಾಜ್, ಸಹೋದರಿಯರಾದ ಯಮುನ ಶ್ರೀಯಾನ್, ಸುಂದರಿ ಶ್ರೀಯಾನ್ ಹಾಗೂ ಅಪಾರ ಬಂಧು ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರ ವಿನೋದ್, ಅಳಿಯ ಸುಧೀರ್ ಈ ಹಿಂದೆ ನಿಧನ ಹೊಂದಿದ್ದಾರೆ.