ಬಿರಿಯಾನಿ ಎಲ್ಲರ ಮೆಚ್ಚಿನ ಖಾದ್ಯ. ಇದರ ಪರಿಮಳ ಮೂಗಿಗೆ ಬಡಿದರೆ ಬಾಯಲ್ಲಿ ನೀರೂರಿಸುತ್ತದೆ. ಸಾಮಾನ್ಯವಾಗಿ ಚಿಕನ್ ಬಿರಿಯಾನಿ, ಹೈದರಾಬಾದ್ ಮಟನ್ ಬಿರಿಯಾನಿ, ವೆಜ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಪ್ರಾನ್ ಬಿರಿಯಾನಿ ಗೊತ್ತೇ ಇದೆ.. ಆದರೆ ಪಾರ್ಲೆ-ಜಿ ಬಳಸಿ ಬಿರಿಯಾನಿ ಮಾಡುವ ಬಗ್ಗೆ ಯೋಚಿಸಿದ್ದೀರಾ.. ಇದು ಸ್ವಲ್ಪ ವಿಚಿತ್ರ ಎನಿಸಬಹುದು ಆದರೆ ಇದು ಸಂಪೂರ್ಣ ಸತ್ಯ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ.. ಇದರಲ್ಲಿ ಪಾರ್ಲೆ ಜಿ ಬಿಸ್ಕೆಟ್ ಜೊತೆ ಬಿರಿಯಾನಿ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ವೀಡಿಯೊದಲ್ಲಿ ದೊಡ್ಡ ಪಾತ್ರೆಯಲ್ಲಿ ಅನ್ನದ ಜೊತೆಗೆ ಪಾರ್ಲೆ ಜಿ ಬಿಸ್ಕತ್ತು ಇರುವುದನ್ನು ಕಾಣಬಹುದು. ಒಳ್ಳೆಯ ಮಸಾಲೆ ಹಾಕಿ ಈ ಬಿರಿಯಾನಿ ಮಾಡಿದ್ದೇನೆ ಎಂದು ಮಹಿಳೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಹಂಚಿಕೊಂಡ ಕೇವಲ 3 ದಿನಗಳಲ್ಲಿ 1ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿರುವ ಮಹಿಳೆಯ ಹೆಸರು ಹೀನಾ ಕೌಸರ್. ಈ ವೀಡಿಯೋ ನೋಡಿದವರೆಲ್ಲ ನಾನಾ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ಈ ಮಹಿಳೆ ವಿರುದ್ಧ ಒಬ್ಬರು ಪ್ರಕರಣ ದಾಖಲಿಸಬೇಕು.. ಮತ್ತೊಬ್ಬರು ಈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.. ಹೀಗೆ ಬಿರಿಯಾನಿ ತಯಾರಿಸಿ ಊಟ ಹಾಳು ಮಾಡಿದ್ದಾಳೆ.. ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.