ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ 1 ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯ ಮೊದಲ ಕಂತು ಆ. 27ಕ್ಕೆ ಮನೆ ಯಜಮಾನಿಯ ಖಾತೆ ಸೇರಲಿದೆ.
ಈ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ. ಆದರೆ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಸುಲಭವಾಗಲಿ ಅನ್ನುವ
ದೃಷ್ಟಿಯಿಂದ ಸರ್ಕಾರ Whatsapp ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. 8147500500 ನಂಬರ್‌ನಲ್ಲಿ ವ್ಯಾಟ್ಸ್ಆಪ್ ತೆರೆದರೆ ಚಾಟ್ ಬಾಕ್ಸ್ ಓಪನ್ ಆಗುತ್ತದೆ. ಇದರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.