ತುಳಸಿ ಗಿಡವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಚೆನ್ನಾಗಿ ಆ ಕುಟುಂಬವು ಸಂಪತ್ತು, ಸಮೃದ್ಧಿ, ಸಂತೋಷವನ್ನು ಪಡೆದುಕೊಳ್ಳುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದಾಗ ನಾವು ಈ ವಿಚಾರಗಳ ಕುರಿತು ವಿಶೇಷ ಕಾಳಜಿ ವಹಿಸಬೇಕು. ಮನೆಯಲ್ಲಿ ತುಳಸಿ ಗಿಡವಿದ್ದಾಗ ನಾವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು.? ತುಳಸಿಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸುವುದು ಉತ್ತಮ.
ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪೂಜನೀಯ ಸಸ್ಯವೆಂದು ಪರಿಗಣಿಸಲಾಗಿದೆ. ಯಾವ ಮನೆಯಲ್ಲಿ ತುಳಸಿಯನ್ನು ಪ್ರತಿನಿತ್ಯ ಪೂಜಿಸುತ್ತಾರೋ ಆ ಮನೆಯಲ್ಲಿ ಸುಖ, ಸಮೃದ್ಧಿ, ಐಶ್ವರ್ಯ ಸದಾಕಾಲ ನೆಲೆಸಿರುತ್ತದೆ ಎಂದು ಹೇಳಲಾಗಿದೆ. ವಿಷ್ಣು ದೇವನಿಗೂ ತುಳಸಿಯೆಂದರೆ ತುಂಬಾನೇ ಪ್ರಿಯ. ನಾರಾಯಣನ ಪೂಜೆ ಮತ್ತು ಅರ್ಪಣೆ ತುಳಸಿ ಇಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಗ್ಗೆ ತುಳಸಿಗೆ ನೀರು ಕೊಟ್ಟು ಸಂಜೆ ತುಳಸಿ ಗಿಡದ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎನ್ನುವ ನಂಬಿಕೆಯಿದೆ. ಆದರೆ ತುಳಸಿಯನ್ನು ಪೂಜಿಸುವಾಗ ನೀವು ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನೀವು ಪೂಜೆಯ ಸರಿಯಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ.