ಉಡುಪಿ: ಪವರ್ ಸಂಸ್ಥೆ(ಮಹಿಳಾ ಉದ್ಯಮಿಗಳ ಸಂಘಟನೆ)ಯ ವತಿಯಿಂದ ಚಾರ್ಟರ್ ಡೇ, ಪದಗ್ರಹಣ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಇದೇ ಮಾರ್ಚ್ 10ರಂದು ಸಂಜೆ 5.30ಕ್ಕೆ ಮಣಿಪಾಲ ವಿದ್ಯಾರತ್ನನಗರದ ಟೀ ಟ್ರೀ ಸುಯಿಟ್ಸ್ ನಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು.
ಉಡುಪಿಯಲ್ಲಿ ಮಾ.6ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷೆ ಹರಿನಾ ಜೆ.ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಿಳಾ ಉದ್ಯಮಿದಾರರಿಗೆ ಪ್ರೋತ್ಸಾಹ ಹಾಗೂ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ 11 ಸ್ಥಾಪಕ ಸದಸ್ಯರೊಂದಿಗೆ ಆರಂಭಗೊಂಡ ಪವರ್ ಸಂಸ್ಥೆ ಇದೀಗ 100 ಸದಸ್ಯರನ್ನು ಹೊಂದಿದೆ. ಪವರ್ ಸೆಮಿನಾರ್, ಪವರ್ ಪರ್ಬ ಮೊದಲಾದ ಕಾರ್ಯಕ್ರಮಗಳ ಮೂಲಕ ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿಯೋಜಿತ ಕಾರ್ಯದರ್ಶಿ ಸುಜಯ ಶೆಟ್ಟಿ, ನಿಯೋಜಿತ ಉಪಾಧ್ಯಕ್ಷೆ ಪ್ರಿಯಾ ಕಾಮತ್, ನಿಯೋಜಿತ ಜೊತೆ ಕಾರ್ಯದರ್ಶಿ ಸಪ್ನಾ ಸಾಲಿನ್ಸ್, ನಿರ್ಗಮಿತ ಅಧ್ಯಕ್ಷೆ ಸುವರ್ಷ, ನಿರ್ಗಮಿತ ಜೊತೆ ಕಾರ್ಯದರ್ಶಿ ಸ್ನೇಹಾ ಆಚಾರ್ಯ ಉಪಸ್ಥಿತರಿದ್ದರು.