ಅಕ್ಷಯ ಕಾಲೇಜಿನಲ್ಲಿ – ಬಿಸಿಎ ವಿಭಾಗದ “ಬೈಟ್ ಬ್ಲಿಜ್” ಐ ಟಿ ಕ್ಲಬ್ ನವತಿಯಿಂದ ಕಾರ್ಯಾಗಾರ

Share with

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಸಿ. ಎ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಮಾಹಿತಿ ತಂತ್ರಜ್ಞಾನ ಸಂಘ ವತಿಯಿಂದ “ಸಾಫ್ಟವೇರ್  ಡೆವಲಪ್ಮೆಂಟ್ ಲೈಫ್ ಸೈಕಲ್” ಎಂಬ ವಿಷಯದಲ್ಲಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಮಾರಿ ಗೌತಮಿ ಸಾಫ್ಟ್‌ವೇರ್ ಎಂಜಿನಿಯರ್ ಬಿ ಸಿ ಎ ವಿಭಾಗದ ವಿದ್ಯಾರ್ಥಿಗಳಿಗೆ   ವಿಶೇಷ ಉಪನ್ಯಾಸದೊಂದಿಗೆ ಸಾಫ್ಟವೇರ್ ಡೆವಲಪ್ಮೆಂಟ್ ಗೆ ಸಂಬಂಧಿಸಿದಂತೆ  ಉನ್ನತ ಗುಣಮಟ್ಟದ ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಲು ಹಾಗೂ ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಸಂಬಂಧಿಸಿದ ಪ್ರಕ್ರಿಯೆಗಳ ಬಗ್ಗೆ  ಸಾಕಷ್ಟು ಮಾಹಿತಿಗಳನ್ನು ನೀಡಿದರು. 
ಬಿ ಸಿ ಎ ವಿಭಾಗದ ಮುಖ್ಯಸ್ಥೆ  ಶ್ರೀಮತಿ ದೀಕ್ಷಾ ರೈ, ಸಹ ಪ್ರಾಧ್ಯಾಪಕಿರಾದ ಕುಮಾರಿ ಸೌಜನ್ಯ ಹಾಗೂ ನಿಧಿ ಶ್ರೀ   ಭಾಗವಹಿಸಿದರು. ದ್ವಿತೀಯ ಬಿ.ಸಿ. ಎ ವಿಭಾಗದ ವಿದ್ಯಾರ್ಥಿ ಗಳಾದ ಪೃಥ್ವಿರಾಜ್ ಸ್ವಾಗತಿಸಿ, ಸೃಜನ್  ವಂದಿಸಿದರು. 


Share with

Leave a Reply

Your email address will not be published. Required fields are marked *