ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಟಿರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್” ಇಂಟಿರಿಯರ್ ಡಿಸೈನ್ ಸಂಘಟನೆ ಹಾಗೂ “ಭಾರತ್ ಅಕಾಡಮಿ ಆಫ್ ಲಿಬರಲ್ ಎಜುಕೇಷನ್” (BASE) ಜಂಟಿಯಾಗಿ ಆರಂಭಿಸಿದ “Auto Desk- 3DS Max & 3D Rendering” ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರದ ಭಾಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲ್,ಆಡಳಿತಾಧಿಕಾರಿ ಅರ್ಪಿತ್ ಟಿ ಎ ಮತ್ತು ಉಪ ಪ್ರಾಂಶುಪಾಲ ರಕ್ಷಣ ಟಿ ಆರ್ ಉಪಸ್ಥಿತರಿದ್ದರು. ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲ್ ಅವರು ಮಾತನಾಡಿ , ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಯನ್ನು ನೀಡುವುದರ ಮೂಲಕ ವಿಷಯಗಳನ್ನು ಮನದಟ್ಟು ಮಾಡುವಲ್ಲಿ ಸಹಕಾರಿಯಾಗಿದೆ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. BASE ಅಕಾಡಮಿಯ ಸ್ಥಾಪಕ ನವೀನ್ ಗುರುರಾಜ್ ವಿದ್ಯಾರ್ಥಿಗಳಿಗೆ Auto Desk- 3DS Max & 3D Rendering” ನ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು. ನಿರ್ವಾಹಕಿ ಸುಧಾ ಜಯರಾಮ್, ಇಂಟಿರಿಯರ್ ಡಿಸೈನ್ ವಿಭಾಗದ ಸಹಪ್ರಾಧ್ಯಾಪಕಿಯಾರಾದ ಶ್ರೀಮತಿ ಕಾವ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗು ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ತರು ರಕ್ಷಣ ಟಿ ಆರ್ ಕಾರ್ಯಕ್ರಮ ವನ್ನು ನಿರೂಪಿಸಿದರು