ಜರ್ಮನಿಯ ದೆಸೆಲ್ಡಾರ್ಫ್ ನಗರದಲ್ಲಿ 2ನೇ ವಿಶ್ವಯುದ್ಧ ಕಾಲದ್ದು ಎನ್ನಲಾದ ಸಜೀವ ಬಾಂಬ್ ಪತ್ತೆಯಾಗಿದ್ದು ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿನ ಸುಮಾರು 13,000 ಜನರನ್ನು ಸ್ಥಳಾಂತರಿಸಲಾಗಿದೆ. ಪೊಲೀಸರು & ಬಾಂಬ್ ನಿಷ್ಕ್ರಿಯ ತಂಡ ಸ್ಥಳಕ್ಕೆ ದೌಡಾಯಿಸಿದೆ.
ಒಂದು ಟನ್ ತೂಕದ ಬಾಂಬ್ ಇದಾಗಿದ್ದು ನಗರದ ಮೃಗಾಲಯದ ಬಳಿ ಕೆಲಸ ಮಾಡುತ್ತಿರುವ ವೇಳೆ ಪತ್ತೆಯಾಗಿದೆ. 2017ರಲ್ಲಿಯೂ ಫ್ರಾಂಕ್‌ಫರ್ಟ್ ಪ್ರದೇಶದಲ್ಲಿ 1.4ಟನ್ ಬಾಂಬ್ ವಶಪಡಿಸಿಕೊಂಡು 65000 ಜನರನ್ನು ಸ್ಥಳಾಂತರಿಸಲಾಗಿತ್ತು.