2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Share with

ಅದೃಷ್ಟವಶಾತ್‌ ಸ್ಫೋಟದ ಸಂದರ್ಭದಲ್ಲಿ ಯಾವುದೇ ವಿಮಾನಗಳು ಘಟನ ಸ್ಥಳದಲ್ಲಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಆದಾಗ್ಯೂ, 80 ವಿಮಾನಗಳ ಪ್ರಯಾಣ ರದ್ದು ಗೊಳಿಸಲಾಗಿದೆ.

ಜಪಾನ್ ಮಿಯಾಜಾಕಿ ವಿಮಾನ ನಿಲ್ದಾಣದ ಟ್ಯಾಕ್ಸಿ ವೇನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ರಸ್ತೆಯ ಡಾಂಬರು ಕಿತ್ತು 6-7 ಅಡಿ ಎತ್ತರದ ವರೆಗೆ ಕಾರಂಜಿಯಂತೆ ಚಿಮ್ಮಿವೆ. ವಿಮಾನ ನಿಲ್ದಾಣದ ಸಮೀಪವಿರುವ ವಿಮಾನಯಾನ ಶಾಲೆಯಿಂದ ಈ ದೃಶ್ಯ ಸೆರೆ ಹಿಡಿಯಲಾಗಿದ್ದು, ಜಾಲತಾಣಗಳಲ್ಲೂ ಇದು ಭಾರೀ ವೈರಲ್‌ ಆಗಿದೆ. ಅಲ್ಲದೇ, ಸ್ಫೋಟ ದಿಂದಾಗಿ ಟ್ಯಾಕ್ಸಿ ವೇನಲ್ಲಿ 7 ಮೀಟರ್‌ ಸುತ್ತಳತೆಯ 3 ಅಡಿ ಆಳದ ಬೃಹತ್‌ ಗುಂಡಿ ಆಗಿದೆ. ಯಾವುದೇ ಸಾವು- ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *