ಪುರಿ ಜಗನ್ನಾಥ ದೇವಾಲಯವನ್ನು ಧ್ವಂಸ ಮಾಡುವಂತೆ ಗೋಡೆಯಲ್ಲಿ ಬರಹ..!

Share with

ಪುರಿ: ಜಗನ್ನಾಥ ದೇವಾಲಯವನ್ನು ಭಯೋತ್ಪಾದಕರು ಧ್ವಂಸಗೊಳಿಸಲಿದ್ದಾರೆ ಎಂಬ ಬೆದರಿಕೆಯುಳ್ಳ 2 ಗೋಡೆ ಬರಹಗಳನ್ನು ಸ್ಥಳೀಯ ದೇಗುಲವೊಂದರ ಗೋಡೆಯ ಮೇಲೆ ಬರೆಯಲಾಗಿದೆ.

ಪುರಿಯ ಪ್ರಸಿದ್ಧ ಜಗನ್ನಾಥ ದೇಗುಲದ ಸನಿಹದಲ್ಲಿನ ಬಾಲಿ ಸಾಹಿಯಲ್ಲಿರುವ ಮಾ ಬುಧೀ ಠಾಕೂರಾಣಿ ದೇಗುಲದ ಗೋಡೆಯಲ್ಲಿ “ಭಯೋತ್ಪಾದಕರು ಶ್ರೀಮಂದಿರವನ್ನು ನೆಮಸಮಗೊಳಿಸಲಿದ್ದಾರೆ. ನನಗೆ ಕರೆ ಮಾಡಿ, ಇಲ್ಲವಾದಲ್ಲಿ ನಾಶ ಖಂಡಿತ’ ಎಂದು ಬರೆಯಲಾಗಿದೆ.

ದೇಗುಲದ ಗೋಡೆಯಲ್ಲಿ ಪಿಎಂ ಮೋದಿ, ದಿಲ್ಲಿ ಎಂದು ನಮೂದಿಸಿರುವುದೇ ಅಲ್ಲದೆ ಹಲವಾರು ದೂರವಾಣಿ ಸಂಖ್ಯೆಗಳನ್ನು ಬರೆಯಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಲವು ಮಾಹಿತಿಗಳು ಲಭಿಸಿವೆ. ಈ ಕೃತ್ಯದ ಹಿಂದಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ.


Share with

Leave a Reply

Your email address will not be published. Required fields are marked *