ನವರಾತ್ರಿ ಪ್ರಯುಕ್ತ ಕರಿಬೈಲ್ ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ

Share with

ಮಂಜೇಶ್ವರ: ಮಜೀಬೈಲ್ ಬಳಿಯ ಕರಿಬೈಲ್ ಶ್ರೀ ಮಹಾ ಮಲರಾಯ ಕ್ಷೇತ್ರದಲ್ಲಿ ನವರಾತ್ರಿ ಪೂಜೆಯ ಅಂಗವಾಗಿ ನ್ಯಾಯವಾದಿ ದಾಮೋದರ ಶೆಟ್ಟಿ ಅವರ ಸೇವಾ ರೂಪದ ಸುದ್ದನ್ವ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.

ಕರಿಬೈಲ್ ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ.

ಹಿಮ್ಮೇಳದಲ್ಲಿ ಭಾಗವತ ರಾಗಿ ಶುಭಾನಂದ ಶೆಟ್ಟಿ ಕುಳೂರು, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಭಟ್ ಶ್ರೇಣಿ, ಚಂಡೆಯಲ್ಲಿ ಭಾರ್ಗವ ಕೃಷ್ಣ ವರ್ಕಾಡಿೃ,‌ ಶೃತಿಯಲ್ಲಿ ಶ್ರೀಧರ ಶೆಟ್ಟಿ ಕೆಳಗಿನ ಹೊಸ ಮನೆ ಸಹಕರಿಸಿದರು. ಮುಮ್ಮೇಳದಲ್ಲಿ ಸುಧನ್ವನಾಗಿ ವಿಷ್ಣು ಶರ್ಮ ವಾಟೆ ಪಡುಪು, ಅರ್ಜುನನಾಗಿ ಈಶ್ವರ ಭಟ್ ಸರ್ಪಂಗಳ, ಕೃಷ್ಣನಾಗಿ ನ್ಯಾಯವಾದಿ ದಾಮೋದರ್ ಶೆಟ್ಟಿ, ಮಜಿಬೈಲ್ ಭಾಗವಹಿಸಿದರು. ಕಾರ್ಯಕ್ರಮದ ಬಳಿಕ ಮಹಾಪೂಜೆ ಪ್ರಸಾದ ವಿತರಣೆ ಮತ್ತು ಲಘು ಉಪಹಾರ ನಡೆಯಿತು.


Share with

Leave a Reply

Your email address will not be published. Required fields are marked *