
ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಕನಮನೆ ಜಲಪಾತಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಇದೇ ಜಲಪಾತ ಹಾಗೂ ನದಿಯ ಪಾತ್ರದಲ್ಲಿ ಸಾವು ನೋವುಗಳು ಸಂಭವಿಸಿರುವಿದರಿಂದ ಯಾರೂ ಸಹಾ ಜಲಪಾತಕ್ಕೆ ಹಾಗೂ ನದಿಯ ಪಾತ್ರಕ್ಕೆ ಇಳಿಯದಂತೆ ಯಸಳೂರು ಪೊಲೀಸ್ ಠಾಣಾ ಪ್ರಕಟಣೆ ಹೊರಡಿಸಿದೆ.





