ಸುಳ್ಯ: ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ಕುಂಚಡ್ಕ ಎಂಬಲ್ಲಿ ಆಸ್ತಿ ವಿಚಾರದಲ್ಲಿ ಅಣ್ಣ ಮತ್ತು ತಮ್ಮ ಮಧ್ಯೆ ಚಕಮಕಿ ನಡೆದು ಅಣ್ಣ ತಮ್ಮನಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಅ.1 ರಂದು ನಡೆದಿದೆ.
ರವಿವಾರ ಆಸ್ತಿ ವಿಚಾರವಾಗಿ ಸಹೋದರರೊಳಗೆ ಮಾತು ಬೆಳೆದಿದ್ದು, ಈ ವೇಳೆ ಅಣ್ಣ ಲವ ಕುಮಾರ್ ಎಂಬವರು ತಮ್ಮ ರವಿಚಂದ್ರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಸಹೋದರನ ಕತ್ತಿಯೇಟಿನಿಂದ ಗಾಯಗೊಂಡಿರುವ ರವಿಚಂದ್ರ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.