ಶ್ರೀನಗರ: ಇಂದು ಜಗತ್ತಿನಾದ್ಯಂತ ಯೋಗ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಯೋಗದತ್ತ ಜನರು ಆಕರ್ಷಿತರಾಗುತ್ತಿದ್ದಾರೆ ಇದರೊಂದಿಗೆ ಯೋಗದಿನ ವಿಶ್ವದಾದ್ಯಂತ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನದಲ್ಲಿ ಭಾಗವಹಿಸಿ ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಯೋಗ ದಿನದಲ್ಲಿ ಭಾಗಿಯಾಗಿರುವ ಎಲ್ಲಾ ಜನತೆಗೆ ನನ್ನ ಅಭಿನಂದನೆಗಳು ಯೋಗದಿಂದ ಮನಸ್ಸಿಗೆ ಏಕಾಗ್ರತೆ ಜೊತೆಗೆ ಶಕ್ತಿಯೂ ಸಿಗುತ್ತದೆ ಎಂಬುದು ಶ್ರೀನಗರಕ್ಕೆ ಬಂದ ನಂತರ ಗೊತ್ತಾಯಿತು ಎಂದು ಪ್ರಧಾನಿ ಹೇಳಿದ್ದಾರೆ. ಶ್ರೀನಗರದ ದಾಲ್ ಸರೋವರದ ದಂಡೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸುಮಾರು ಏಳು ಸಾವಿರ ಮಂದಿ ಯೋಗ ಭಾಗವಹಿಸಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದ ಪ್ರಧಾನಿ. ಹತ್ತು ವರ್ಷಗಳ ಹಿಂದೆಯೇ ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲು ಮುಂದಾಗಿದ್ದೆ ಎಂದರು. ಭಾರತದ ಪ್ರಸ್ತಾಪವನ್ನು 177 ದೇಶಗಳು ಬೆಂಬಲಿಸಿದವು, ಇದು ಸ್ವತಃ ದಾಖಲೆಯಾಗಿದೆ ಎಂದು ಹೇಳಿದರು.