ಪುತ್ತೂರು: ಪುತ್ತೂರು ಜೆಸಿಐ ಸಪ್ತಾಹದಂಗವಾಗಿ ಜೆಸಿಐ ವತಿಯಿಂದ ಮೊಟ್ಟೆತ್ತಡ್ಕ ಸರಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ಯೋಗ ತರಬೇತಿ, ಆರೋಗ್ಯ ತಪಾಸಣೆ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಯೋಗ ತರಬೇತುದಾರೆ ಭಾರತೀ ನೆಲ್ಲಿತ್ತಾಯರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಹ, ಉಸಿರು, ಮನಸ್ಸು ಇದನ್ನು ಒಗ್ಗೂಡಿಸಿಕೊಂಡು ಮಾಡುವ ಪ್ರಕ್ರಿಯೆಯೇ ಯೋಗ. ಹಿಂದಿನ ಕಾಲದಲ್ಲಿ ಜನರ ಜೀವನ ಶೈಲಿಯಲ್ಲಿ ಯೋಗ ಅಡಕವಾಗಿತ್ತು. ನಮ್ಮ ಹಿರಿಯರು ಯೋಗ ಶೈಲಿಯಲ್ಲಿ ಜೀವನ ನಡೆಸುತ್ತಿದ್ದರು. ದಿನನಿತ್ಯದ ಚಟುವಟಿಕೆಗಳಲ್ಲಿ ಯೋಗದ ಪರಿಣಾಮ ಸಿಗುತ್ತಿತ್ತು. ಆಧುನಿಕ ಜೀವನದಲ್ಲಿ ಯಂತ್ರಗಳ ಹಾವಳಿಯಿಂದ ಜೀವನ ಶೈಲಿ ಬದಲಾಗಿದೆ ಎಂದರು. ಯೋಗದಿಂದ ಮನನಸ್ಸಿನ ದುರ್ಬಲತೆ ಹೋಗುತ್ತದೆ. ಮಾನಸಿಕ ಆರೋಗ್ಯ ಬರುತ್ತದೆ. ಯೋಗ ಜೀವನ ನಡೆಸುವ ಕೌಶಲ್ಯ ಒದಗಿಸುತ್ತದೆ. ಇಂದು ೧೭೧ ದೇಶಗಳಲ್ಲಿ ಯೋಗ ದಿನಾಚರಣೆ ನಡೆಸಲಾಗುತ್ತದೆ. ಪಾಶ್ಚಾತ್ಯ ದೇಶಗಳು ಯೋಗವನ್ನು ಅಧ್ಯಯನ ಮಾಡಿ ಯೋಗದ ಮಹತ್ವವನ್ನು ಕಂಡುಕೊAಡಿದ್ದಾರೆ. ಎಂದು ಹೇಳಿದರು. ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಜೆಸಿಐ ಸಾಮಾಜಿಕ ಸಂಪರ್ಕದ ಉದ್ಧೇಶದಿಂದ ಪ್ರತೀ ವರ್ಷ ಜೆಸಿಐ ಸಪ್ತಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಜೆಸಿಐ ಪುತ್ತೂರು ವತಿಯಿಂದ ಸೆ.೯ರಿಂದ ೧೫ರವರೆಗೆ ಜೆಸಿಐ ಸಪ್ತಾಹ ನಡೆಯಲಿದೆ. ಈ ಅವಧಿಯಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜೆಸಿಐ ಸಾಮಾಜಿಕ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತದೆ. ಈ ಮೂಲಕ ಮಕ್ಕಳಿಗೆ ಯೋಗ, ಆರೋಗ್ಯ ಶಿಬಿರ, ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪುತ್ತೂರು ಜೆಸಿಐ ನಿದೇಶಕ ರುಕ್ಮಯ ಕುಲಾಲ್, ಶಾಲಾ ಮುಖ್ಯಗುರು ಸಂತೋಷ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಅತಿಥಿಗಳಿಗೆ ಹೂ, ಪುಸ್ತಕ ನೀಡಿ ಗೌರವಿಸಿದರು. ಜೆಸಿಐ ಕೋಆರ್ಡಿನೇಟರ್ ವಸಂತಲಕ್ಷಿö್ಮ ಅತಿಥಿಗಳನ್ನು ಪರಿಚಯಿಸಿದರು. ಚೇತನ್ ಕುಮಾರ್ ಜೆಸಿಐ ಸಂದೇಶ ವಾಚಿಸಿದರು. ಜೆಸಿಐ ಕಾರ್ಯದರ್ಶಿ ಕಾರ್ತಿಕ್ ಬಿ. ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಶಾಲಾ ಆವರಣದಲ್ಲಿ ಸುಮಾರು ೫೦ ಅಡಿಕೆ ಗಿಡ ನೆಡಲಾಯಿತು. ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನಡೆಯಿತು. ಶಾಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಶ್ವಾನ ಸಹಿತ ಸಾಕುಪ್ರಾಣಿಗಳ ಪ್ರದರ್ಶನ
ಸೆ.9ರಿಂದ 15ರವರೆಗೆ ಜೆಸಿಐ ಸಪ್ತಾಹ ನಡೆಯಲಿದ್ದು ಸೆ.10ರಂದು ದಿ ಪುತ್ತೂರು ಕ್ಲಬ್‌ನಲ್ಲಿ ವಿಶೇಷ ತಳಿಗಳ ಶ್ವಾನ ಸಹಿತ ಸಾಕುಪ್ರಾಣಿಗಳ ಪ್ರದರ್ಶನ ನಡೆಯಿತು. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕೊಡಗು ಭಾಗಗಳಿಂದ ಪ್ರಾಣಿಪ್ರಿಯರು ಭಾಗವಹಿಸಬಹುದ್ದಾರೆ. ಎಂದು ಜೆಸಿಐ ಪುತ್ತೂರು ಅಧ್ಯಕ್ಷ ಸುಹಾಸ್ ಮರಿಕೆ ತಿಳಿಸಿದ್ದಾರೆ.