‘ಸಾಯೋವರೆಗೆ ನಿಮ್ಮ ಮರೆಯಲ್ಲ’; ಸುದೀಪ್ಗೆ ತಲೆಬಾಗಿ ನಮಸ್ಕರಿಸಿ ಧನ್ಯವಾದ ಹೇಳಿದ ಗಿಲ್ಲಿ

Share with

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಂತಿಮ ಹಂತಕ್ಕೆ ಬಂದಿದೆ. ಗಿಲ್ಲಿ ಕಪ್ ಎತ್ತಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹೀಗಿರುವಾಗಲೇ ಗಿಲ್ಲಿ ಅವರು ಸುದೀಪ್ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ಅವರು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.

ಗಿಲ್ಲಿ ನಟ ಅವರ ವಿಟಿಯನ್ನು ಹಾಕಿದರು. ಇದು ತುಂಬಾನೇ ಅದ್ಭುತವಾಗಿತ್ತು. ಈ ವಿಡಿಯೋ ಗಮನ ಸೆಳೆಯಿತು. ಗಿಲ್ಲಿ ಅವರಿಗೆ ಇದನ್ನು ನೋಡಿ ಒಂದು ಸಿನಿಮಾ ನೋಡಿದಂತೆ ಆಯಿತು. ಆ ಬಳಿಕ ಮಾತನಾಡಿದ ಗಿಲ್ಲಿ, ‘ಇದು ಶೋ ಅಲ್ಲ, ಜೀವನ ಅಂತ ಗೊತ್ತಾಯ್ತು. ತಪ್ಪನ್ನು ತಿದ್ದಿ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದೀರಿ. ಸಾಯೋವರೆಗೆ ನಿಮ್ಮ ಮರೆಯಲ್ಲ’ ಎಂದರು ಗಿಲ್ಲಿ.


Share with

Leave a Reply

Your email address will not be published. Required fields are marked *