ಉಪ್ಪಳ: ಉಪ್ಪಳ ಪೇಟೇಯಲ್ಲಿ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದ ಯುವ ವ್ಯಪಾರಿ ಟರ್ಫ್ ಗ್ರೌಂಡ್‌ನಲ್ಲಿ ಹೃದಯಘಾತದಿಂದ ನಿಧನರಾದರು. ಉಪ್ಪಳ ಬಳಿಯ ಹಿದಾಯತ್‌ನಗರ ನಿವಾಸಿ [ದಿ] ಹುಸೈನಾರ್ ರವರ ಪುತ್ರ ನಜೀರ್ [೩೪] ನಿಧನರಾದರು. ಜುಲೈ. 14ರಂದು ರಾತ್ರಿ ಸುಮಾರ್ ೭.೩೦ರ ವೇಳೆ ಸೋಂಕಾಲಿನ ಟರ್ಫ್ ಗ್ರೌಂಡ್‌ನಲ್ಲಿ ಶಟ್ಲ್ ಆಟವಾಡಿ ವಿಶ್ರಾಂತಿ ತೆಗೆಯುತ್ತಿದ್ದ ಮಧ್ಯೆ ಹೃದಯಘಾತ ಉಂಟಾಗಿದ್ದು, ಕೂಡಲೇ ಉಪ್ಪಳ ಬಳಿಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಮೃತರು ತಾಯಿ ಭೀಫಾತಿಮ್ಮ, ಪತ್ನಿ ಫದಿಲ, ಪುತ್ರಿ ಫಾತಿಮತ್ ಇಶಾ, ಸಹೋದರ ನಿಯಾಜ್, ಸಹೋದರಿ ನಸೀಮ ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ.