ಬಾಲಕಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಯುವಕನ ಬಂಧನ

Share with

ಮುಳ್ಳೇರಿಯ: ಕಾರಡ್ಕ ಸಮೀಪದ ಪ್ರದೇಶದ ಮನೆಯೊಂದರ ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಬಾಲಕಿಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಮಲಪ್ಪುರಂ ನಿವಾಸಿಯಾದ ಪ್ರಜಿಲ್(21)ನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.

ಪ್ರಜಿಲ್ ಬಾಲಕಿಯ ಮನೆಗೆ ಡೈರೆಕ್ಟ್ ಮಾರ್ಕೆಟಿಂಗ್‌ಗಾಗಿ ತಲುಪಿದಾಗ ಆ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯ ಹೊರಗಿರುವ ಸ್ನಾನದ ಕೊಠಡಿಯಲ್ಲಿ ನೀರು ಬೀಳುತ್ತಿರುವ ಶಬ್ದ ಕೇಳಿ ಯುವಕ ಅಲ್ಲಿಗೆ ತೆರಳಿ ಬಾಗಿಲ ಸಂದಿಯಿಂದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದಂತೆ ಬಾಲಕಿ ಬೊಬ್ಬೆ ಹಾಕಿದಳು. ಪರಾರಿಯಾಗಲು ಯತ್ನಿಸಿದ ಪ್ರಜಿಲ್‌ನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದರು.


Share with

Leave a Reply

Your email address will not be published. Required fields are marked *