ಉಪ್ಪಳ: ಪೈವಳಿಕೆ ಭಂಡಾರ ನಿವಾಸಿ ಅಶೋಕ [೪೩] ಹೃದಯಘಾತದಿಂದ ನಿಧನರಾದರು. ಮೃತರು ಎರಡು ವರ್ಷಗಳ ಕಾಲ ಗಲ್ಫ್ ನಲ್ಲಿ ಖಾಸಾಗಿ ಕಂಪೆನಿಯೊoದರಲ್ಲಿ ಉದ್ಯೋಗಿಯಾಗಿದ್ದರು. ಹಲವು ತಿಂಗಳುಗಳ ಹಿಂದೆ ಊರಿಗೆ ಆಗಮಿಸಿದ್ದರು. ಈ ಮಧ್ಯೆ ಅವರಿಗೆ ಹೃದಯಘಾತ ಉಂಟಾಗಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದರು. ಶನಿವಾರ ರಾತ್ರಿ ೧೦.೩೦ರ ವೇಳೆ ಮತ್ತೆ ಹೃದಯಘಾತ ಉಂಟಾಗಿ ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಮೃತರು ಪತ್ನಿ ಜಯಶ್ರೀ, ಪುತ್ರ ವಿಯಾನ್, ಸಹೋದರ, ಸಹೋದರಿಯರಾದ ಪರಮೇಶ್ವರ, ಕೃಷ್ಣ, ರಮೇಶ, ರತ್ನಾವತಿ, ಭವಾನಿ, ಲಕ್ಷ್ಮಿ.ಸರಸ್ವತೀ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಕೋಚು ಮಡಿವಾಳ, ತಾಯಿ ದೇವಕಿ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಸಿ.ಐ.ಟಿ.ಯು ನೇತಾರ ಎಂ.ಚAದ್ರ ನಾಯ್ಕ್ ಮಾನಿಪ್ಪಾಡಿ, ಸಿಪಿಎಂ ನೇತಾರರಾದ ಅಬ್ದುಲ್ಲ.ಕೆ, ನಾರಾಯಣ ಶೆಟ್ಟಿ, ಶ್ರೀನಿವಾಸ ಭಂಡಾರಿ ಸಹಿತ ವಿವಿಧ ರಾಜಕೀಯ, ಸಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಅಂತಿಮನಮನವನ್ನು ಸಲ್ಲಿಸಿದರು. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಕಮಿಟಿ, ಕಳಾಯಿ ಬ್ರಾಂಚ್, ಪೈವಳಿಕೆ ಬ್ರಾಂಚ್ ಕಮಿಟಿ, ಡಿ.ವೈ.ಎಫ್.ಐ, ಸಿ.ಐ.ಟಿ.ಯು ಮೊದಲಾದ ಸಂಘಟನೆಗಳು ಸಂತಪ ಸೂಚಿಸಿದೆ.