ಉಪ್ಪಳ: ಬಿದ್ದು ಸಿಕ್ಕಿದ 7500 ರೂ ಹಣವಿದ್ದ ಪರ್ಸ್ ಅದರ ವರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ಯುವಕನನ್ನು ಸ್ಥಳೀಯರು ಅಭಿನಂದಿಸಿದ್ದಾರೆ.
ಬಂದ್ಯೋಡಿನಲ್ಲಿ ಅಲುಮೀನಿಯಂ ಫೆಬ್ರಿಕ್ಸ್ ಅಂಗಡಿ ನಡೆಯುತ್ತಿರುವ ಕುಡಾಲು ಮೇರ್ಕಳ ಪದ್ಮಗದ್ದೆ ನಿವಾಸಿ ಜೋಗಿ ಮೂಲ್ಯ ರವರ ಪುತ್ರ ಮಧು ಕಿರಣ್ ಹಣಹೊಂದಿದ ಪರ್ಸ್ ವಾರೀಸುದಾರರಾದ ಕುಡಾಲು ನಿವಾಸಿ ಬಶೀರ್.ಬಿ.ಎ ರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಇವರ ಪರ್ಸ್ ಕಳೆದು ಹೋಗಿತ್ತು. ಮಧುಕಿರಣ್ ಕೆಲಸ ಮುಗಿಸಿ ಮನೆ ಕಡೆಗೆ ಹೋಗುವ ವೇಳೆ ಸುಬ್ಬಯ್ಯ ಕಟ್ಟೆಯಲ್ಲಿ ಪರ್ಸ್ ಬಿದ್ದು ಸಿಕ್ಕಿದೆ. ಬಳಿಕ ಅದರಲ್ಲಿದ್ದ ಲೈಸನ್ ಸಹಿತ ದಾಖಲೆಗಳನ್ನು ನೋಡಿ ವಾರೀಸುದಾರರನ್ನು ಪತ್ತೆ ಹಚ್ಚಿ ಹಸ್ತಾಂತರಿಸಿದ್ದಾರೆ. ಮಧುಕಿರಣ್ ರಿಗೆ ಬಹುಮಾನವನ್ನು ನೀಡಲು ಮುಂದಾಗಿದ್ದು ಆದರೆ ಅವರು ಸ್ವೀಕರಿಸಲಿಲ್ಲ. ಇವರ ಮಾನವೀಯತೆಗೆ ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ ಭಂಡಾರಿ ಸಹಿತ ಊರವರು ಅಭಿನಂದನೆ ಸಲ್ಲಿಸಿದ್ದಾರೆ.