ಮಂಗಳೂರು: ಆನ್ಲೈನ್ ಹೂಡಿಕೆ ಮಾಡಿ ಹಣ ಕಳೆದುಕೊಂಡ ಪರಿಣಾಮ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಆರ್ ಪಿ ಸಿ ಎಂಬ ಆನ್ಲೈನ್ ಆಪ್ ಹಣ ಹೂಡಿಕೆಯ ಜಾಲ ಜಿಲ್ಲೆಯಾದ್ಯಂತ ಪಸರಿಸಿದ್ದು ಡಿ.24 ರಂದು ಆಪ್ ಸ್ಥಗಿತಗೊಂಡಿತ್ತು.
ಅದೇ ದಿನ ಮೂಡುಶೆಡ್ಡೆ ನಿವಾಸಿ ಸೂರ್ಯ (24) ನಾಪತ್ತೆಯಾಗಿದ್ದರು. ಗುರುವಾರ ಅವರ ಮೃತದೇಹ ಮರವೂರು ನದಿಯಲ್ಲಿ ಪತ್ತೆಯಾಗಿದೆ.
ಅವರು ಆರ್ ಪಿ ಸಿ ಆಪ್ ನಲ್ಲಿ ಸುಮಾರು 70000 ರೂಪಾಯಿ ಹೂಡಿಕೆ ಮಾಡಿದ್ದು ಕಂಪನಿ ಮುಚ್ಚಲ್ಪಟ್ಟ ಪರಿಣಾಮ ಸಾಲದ ಹೊರೆಯಲ್ಲಿ ಬಿದ್ದಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸುತ್ತಿದ್ದಾರೆ.