ಕಾಸರಗೋಡು: ಇಲಿಪಾಷಾಣ ಸೇವಿಸಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಪಿಲಿಕೋಡ್ ಕೊಲ್ಲರೋಡಿಯಲ್ಲಿ ನಡೆದಿದೆ.

ಜುಲೈ 26 ರಂದು ಅಶ್ವತಿ(23) ಮನೆಯಲ್ಲಿ ಇಲಿ ವಿಷ ಸೇವಿಸಿದ್ದು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.
ಕೂಡಲೇ ಆಕೆಯನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜುಲೈ 31 ರಂದು ರಾತ್ರಿ ಕೊನೆಯುಸಿರೆಳೆದಿದ್ದಾಳೆ.
ಮೃತಳು ತಂದೆ ವಿದ್ಯಾಧರನ್, ತಾಯಿ ವತ್ಸಲ, ಸಹೋದರ ಅನಿರುದ್ಧ ಸಹೋದರಿ ಆರತಿ ಎಂಬವರನ್ನು ಅಗಲಿದ್ದಾರೆ




